fbpx
ಸಮಾಚಾರ

ಅಪ್ಪ ಆಗ್ತಿದ್ದಾರೆ ಜಹೀರ್ ಖಾನ್: ಮೊದಲ ಮಗುವಿನ ನಿರೀಕ್ಷೆಯಲ್ಲಿ ಜಹೀರ್ ಮತ್ತು ನಟಿ ಸಾಗರಿಕಾ ದಂಪತಿ

ಇತ್ತೀಚಿಗಷ್ಟೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾಗುತ್ತಿರುವ ಸಂತಸವನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಜಹೀರ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಜಹೀರ್ ಖಾನ್ ತಂದೆಯಾಗುತ್ತಿದ್ದಾರೆ.

ಜಹೀರ್ ಖಾನ್ ಮತ್ತು ಪತ್ನಿ ಸಾಗರಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ದಂಪತಿ ಐಪಿಎಲ್ ಗಾಗಿ ಮುಂಬೈನಲ್ಲಿದ್ದಾರೆ. ಇತ್ತೀಚಿಗೆ ಜಹೀರ್ ಖಾನ್ ಪತ್ನಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಈ ವೇಳೆ ಸಾಗರಿಕಾ ಸಡಿಲವಾದ ಉಡುಪನ್ನು ಧರಿಸುತ್ತಿದ್ದಾರೆ. ಅವರ ಅವರ ಬೇಬಿ ಬಂಪ್ ಕ್ಯಾಮರಾಗೆ ಸೆರೆಯಾಗಿದೆ.

ಜಹೀರ್ ಖಾನ್ ಹಾಗೂ ಪತ್ನಿ ನಟಿ ಸಾಗರಿಕಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜಹೀರ್ ಖಾನ್ ದಂಪತಿ ತಂದೆ-ತಾಯಿಯಾಗುತ್ತಿರುವ ಸುದ್ದಿಯನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ.

ಜಹೀರ್ ಅವರು 2017 ರಲ್ಲಿ ಸಾಗರಿಕಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮತ್ತು ಅವರು ಪ್ರಸ್ತುತ ಯುಎಇಯಲ್ಲಿದ್ದಾರೆ. ಪ್ರಸ್ತುತ ಐಪಿಎಲ್ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ಜಹೀರ್ ಕಾರ್ಯನಿರ್ವಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top