fbpx
ಸಮಾಚಾರ

ಐಪಿಎಲ್‍ನಲ್ಲಿ ಮ್ಯಾಚ್‌ ಫಿಕ್ಸಿಂಗ್ ವಾಸನೆ: ಭಾರೀ ಚರ್ಚೆಗೆ ಗ್ರಾಸವಾಗಿದೆ ಮುಂಬೈ ಇಂಡಿಯನ್ಸ್ ಟ್ವೀಟ್

ಐಪಿಎಲ್ 2020ರ ಆವೃತ್ತಿಯಲ್ಲಿ ಫಿಕ್ಸಿಂಗ್ ನಡೆಯುತ್ತಿದ್ದೆಯೇ ಎಂಬ ಅನುಮಾನವನ್ನು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವೆ ಭಾನುವಾರ ನಡೆದ ಪಂದ್ಯಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ಮಾಡಿದ ಟ್ವೀಟ್ ಕಾರಣವಾಗಿದೆ.

 

 

ಮೊನ್ನೆ ನಡೆದ ಪಂದ್ಯದಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್‌ ಆರಂಭವಾದ ಹೊತ್ತಿಗೆ ಟ್ವೀಟ್‌ ಮಾಡಿದ್ದ ಮುಂಬೈ ತಂಡ ಕ್ಯಾಪಿಟಲ್ಸ್‌ ಪಟೆ 19.5 ಓವರ್‌ಗಳಲ್ಲಿ 163/5 ರನ್‌ ಗಳಿಸುತ್ತದೆ, ಮುಂಬೈ ಪರ ಟ್ರೆಂಟ್‌ ಬೌಲ್ಟ್‌ ಜೊತೆಗೆ ಜೇಮ್ಸ್‌ ಪ್ಯಾಟಿನ್ಸನ್‌ ಬೌಲಿಂಗ್‌ ಆರಂಭಿಸಲಿದ್ದಾರೆ ಎಂದು ಟ್ವೀಟ್‌ ಮಾಡಿತ್ತು.

ಕಾಕತಾಳೀಯವೋ ಅಥವಾ ಫಿಕ್ಸಿಂಗ್‌ ಇರಬಹುದೋ ಏನೋ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 162/4 ರನ್‌ಗಳನ್ನು ಗಳಿಸಿತು. ಬಳಿಕ ಮುಂಬೈ ಇಂಡಿಯನ್ಸ್‌ ತಂಡ ಕೂಡಲೇ ಈ ಟ್ವೀಟ್‌ ಅನ್ನು ಡಿಲೀಟ್‌ ಕೂಡ ಮಾಡಿತು. ಆದರೆ ಆ ಹೊತ್ತಿಗಾಗಲೇ ಈ ಟ್ವೀಟ್‌ನ ಸ್ಕೀನ್‌ ಶಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇನಿಂಗ್ಸ್‌ಗೂ ಮೊದಲೇ ಇಷ್ಟು ಅಚ್ಚುಕಟ್ಟಾಗಿ ಮುಂಬೈ ತಂಡ ಎದುರಾಳಿಯ ಸ್ಕೋರ್‌ ಅಂದಾಜಿಸಲು ಸಾಧ್ಯವೇ? ಇದು ಖಂಡಿತಾ ಫಿಕ್ಸಿಂಗ್‌ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ನೆಟ್ಟಿಗರು ಐಪಿಎಲ್‌ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಅಥವಾ ಸ್ಪಾಟ್‌ ಫಿಕ್ಸಿಂಗ್‌ ನಡೆಯಿತ್ತಿದೆ ಎಂದು ಭಾರಿ ಚರ್ಚೆ ಆರಂಭಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top