fbpx
ಸಮಾಚಾರ

ಸೌಂದರ್ಯ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ?

ಇತ್ತೀಚೆಗೆ ಸಾಧನೆ ತೋರಿದ ಖ್ಯಾತ ನಟ-ನಟಿಯರು, ಕ್ರಿಕೆಟಿಗರು, ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರ ಕುರಿತು ಸಿನಿಮಾಗಳನ್ನು ಮಾಡಲಾಗುತ್ತಿದೆ. ಇದೇ ರೀತಿ ಇದೀಗ ಖ್ಯಾತ ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರು ಜೀವನ ಚರಿತ್ರೆ ಕುರಿತು ಬಯೋಪಿಕ್ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ಈ ಸಿನಿಮಾದಲ್ಲಿ ಪ್ರೇಮಂ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಬಹಳಷ್ಟು ಸಿನಿಮಾಗಳಲ್ಲಿ ಭಿನ್ನ ಪಾತ್ರಗಳನ್ನು ಮಾಡಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದ ಸೌಂದರ್ಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಾಯಿ ಪಲ್ಲವಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಬಯೋಪಿಕ್ ನಲ್ಲಿ ನಟಿಸಲು ಸಾಯಿ ಪಲ್ಲವಿ ಸಹ ಆಸಕ್ತರಾಗಿದ್ದು, ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೆಲಸ ಮಾಡುವ ಮೂಲಕ ಸೌಂದರ್ಯ ಕೂಡ ಬಹುಭಾಷಾ ನಟಿಯಾಗಿ ಗಮನಸೆಳೆದವರಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ, ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ. 2004ರಲ್ಲಿ ವಿಮಾನ ದುರಂತದಲ್ಲಿ ಇಹಲೋಕ ತ್ಯಜಿಸಿದರು. ಒಟ್ಟಿನಲ್ಲಿ ಭಾರೀ ಚರ್ಚೆಯಲ್ಲಿರುವ ಸೌಂದರ್ಯ ಬಯೋಪಿಕ್ ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಸದ್ಯದ ಕುತೂಹಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top