fbpx
ಸಮಾಚಾರ

ಆನೆ ಮೇಲಿಂದ ಯೋಗ ಮಾಡಲು ಹೋಗಿ ಜಾರಿಬಿದ್ದ ಬಾಬಾ ರಾಮದೇವ್: ವಿಡಿಯೋ ವೈರಲ್

ಯೋಗ ಮಾಡುತ್ತಿರುವಾಗ ಯೋಗ ಗುರು ಬಾಬಾ ರಾಮ್‍ದೇವ್ ಆನೆಯ ಮೇಲಿಂದ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ.

 

 

ಮಥುರಾದಲ್ಲಿ ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮ್‌ದೇವ್‌ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ತನ್ನ ದೇಹವನ್ನು ಕುಲುಕ್ಕಿದ್ದರಿಂದ ಆಯ ತಪ್ಪಿದ ರಾಮ್‌ದೇವ್‌ ಅವರು ಆನೆಯ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದ್ದಾರೆ.

 

 

ಅದೃಷ್ಟವಶಾತ್​ ಬಾಬಾ ರಾಮ್​ದೇವ್​ ಅವರಿಗೆ ಯಾವುದೇ ಗಾಯಗಳು ಆಗಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗಿದೆ. ಅಲ್ಲದೆ, ಸಾಕಷ್ಟು ಕಮೆಂಟ್​ಗಳು ಕೂಡ ಹರಿದು ಬಂದಿವೆ. ಬಾಬಾ ರಾಮ್‌ದೇವ್‌ ಶೀಘ್ರ ಗುಣಮುಖರಾಗಲಿ ಎಂದು ಹಲವು ನೆಟ್ಟಿಗರು ಹಾರೈಸಿದ್ದಾರೆ.

ಈ ಹಿಂದೆ ಬಾಬಾ ರಾಮ್‍ದೇವ್, ಸೈಕಲ್ ಮೇಲಿಂದ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ವೇಳೆ ಸಹ ಸಾಕಷ್ಟು ಜನ ಅವರನ್ನು ಟ್ರೋಲ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top