fbpx
ಸಮಾಚಾರ

ಆಸ್ಪತ್ರೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ ಕೊಟ್ಟ ಯೂನಿವರ್ಸ್ ಬಾಸ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫುಡ್‌ ಪಾಯ್ಸನ್ ಸಮಸ್ಯೆ ಎದುರಿಸಿರುವ 41 ವರ್ಷದ ಅನುಭವ ಎಡಗೈ ಬ್ಯಾಟ್ಸ್‌ಮನ್‌ ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಖುದ್ದಾಗಿ ಮಾಹಿತಿ ನೀಡಿರುವ ಕ್ರಿಸ್ಟೋಫರ್‌ ಹೆನ್ರಿ ಗೇಲ್‌ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು, ಸಮಸ್ಯೆಯಿಂದ ಚೇತರಿಸುತ್ತಿರುವ ಸುಳಿವುಕೊಟ್ಟಿದ್ದಾರೆ.

“ಇಷ್ಟು ವಿಚಾರವನ್ನು ಮಾತ್ರ ನಾನು ಹೇಳಲು ಬಯಸುತ್ತೇನೆ. ಹೋರಾದ ಹೊರತು ನಾನು ಎಂದೂ ಹಿಂದಕ್ಕೆ ಸರಿದವನಲ್ಲ. ನಾನು ಯೂನಿವರ್ಸ್ ಬಾಸ್.. ಇದು ಎಂದಿಗೂ ಬದಲಾಗುವುದಿಲ್ಲ. ನೀವು ನನ್ನಿಂದ ವಿಚಾರಗಳನ್ನು ಕಲಿಯಬಹುದು ಆದರೆ ನಾನು ಮಾಡುವ ಎಲ್ಲವನ್ನೂ ನೀವು ಅನುಸರಿಸಲು ಸಾದ್ಯವಿಲ್ಲ. ನನ್ನ ಶೈಲಿ ಹಾಗೂ ಅಬ್ಬರವನ್ನು ಮರೆಯಬೇಡಿ” ಎಂದು ಗೇಲ್ ಬರೆದುಕೊಂಡಿದ್ದಾರೆ.

 

 

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭಿಕ ಪಂದ್ಯಗಳಲ್ಲಿ ಕ್ರಿಸ್ ಗೇಲ್ ಅವರನ್ನು ಹೊರಗಿಟ್ಟಿತ್ತು. ಆದರೆ ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದ ನಂತರ ಗೇಲ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಗೇಲ್ ಅನಾರೋಗ್ಯಕ್ಕೆ ಈಡಾಗಿರುವುದನ್ನು ಪಂಜಾಬ್ ತಂಡದ ಕೊಚ್ ಅನಿಲ್ ಕುಂಬ್ಳೆ ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top