fbpx
ಸಮಾಚಾರ

ರವಿಚಂದ್ರನ್ ‘ಕನ್ನಡಿಗ’ ಸಿನಿಮಾ ಮೂಲಕ ಟಾಮ್ ಆಲ್ಟರ್ ಮಗ, ಜೇಮಿ ಆಲ್ಟರ್ ಸ್ಯಾಂಡಲ್ ವುಡ್ ಪ್ರವೇಶ

”ಜಟ್ಟ’ ಗಿರಿರಾಜ್‌ ನಿರ್ದೇಶನದ ಚಿತ್ರದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ನೀವು ಈ ಹಿಂದೆಯೇ ಓದಿದ್ದೀರಿ. ಈಗ ಆ ಸಿನಿಮಾದ ಪೂರ್ವತಯಾರಿ ಜೋರಾಗಿದ್ದು, ಚಿತ್ರೀಕರಣಕ್ಕೆ ಅಣಿಯಾಗಿದೆ. ದಸರಾದಿಂದ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ‘ಕನ್ನಡಿಗ’ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

‘ಕನ್ನಡಿಗ’ ಚಿತ್ರ ಐತಿಹಾಸಿಕ ಸಿನಿಮಾವಾಗಿದ್ದು, ನೈಜ ಕಥೆಯನ್ನ ಆಧರಿಸಿ ಮಾಡಲಾಗ್ತಿದೆ ಅಂತಾರೆ ನಿರ್ದೇಶಕ ಗಿರಿರಾಜ್​. ಬರಹಗಾರರ ಕುಟುಂಬದ ಕನ್ನಡ ಪಂಡಿತನ ಪಾತ್ರದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಕಾಣಿಸಲಿದ್ದಾರೆ. 1550ರ ಇಸವಿಯಲ್ಲಿ ನಡೆದಂತ ಕೆಲವು ನೈಜ ಘಟನೆಗಳನ್ನೂ ಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನಲಾಗ್ತಿದೆ.

ಈ ಚಿತ್ರದಲ್ಲಿ ಫ‌ರ್ಡಿನೆಂಡ್‌ಕಿಟೆಲ್‌ ಪಾತ್ರವೂ ಬರಲಿದ್ದು, ಈ ಪಾತ್ರವನ್ನು ಜೇಮೀ ಆಲ್ಟರ್‌ ಮಾಡುತ್ತಿದ್ದಾರೆ. ಇವರು ಬಾಲಿವುಡ್‌ನ‌ ಖ್ಯಾತ ನಟ ಟಾಮ್‌ ಆಲ್ಟರ್‌ ಅವರ ಪುತ್ರ. 1977 ರಲ್ಲಿ ಬಿಡುಗಡೆಯಾಗಿದ್ದ ಕನ್ನಡದ ‘ಕನ್ನೇಶ್ವರ ರಾಮ’ ಚಿತ್ರದಲ್ಲು ಟಾಮ್ ಆಲ್ಟರ್ ಮೊದಲ ಬಾರಿಗೆ ನಟಿಸಿದ್ದರು.

ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ ಜೇಮಿ, ಈ ಕನ್ನಡ ಚಿತ್ರ ನನ್ನ ಹೊಸ ಪ್ರಾರಂಭ ಎನ್ನುತ್ತಾರೆ. . “ಇದು ನನಗೆ ಹೊಸದಾಗಿರುತ್ತದೆ, ಅದರಲ್ಲೂ ವಿಶೇಷವಾಗಿ ಭಾಷೆ ಮತ್ತು ಹಿರಿಯ ನಟ (ರವಿಚಂದ್ರನ್) ಮತ್ತು ಗಿರಿರಾಜ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ. ಹೆಚ್ಚು ಉತ್ಸಾಹ ತಂದಿದೆ. ನಾನದನ್ನು ಖುಷಿಯಾಗಿ ಸ್ವೀಕರಿಸುತ್ತೇನೆ:

ಗಿರಿರಾಜ್ ನನ್ನನ್ನು ಸಂಪರ್ಕಿಸಿದಾಗ ಮತ್ತು ನಾನು ಯೋಜನೆಯ ಬಗ್ಗೆ ಚರ್ಚಿಸಿದಾಗ, ಅವರು ಹೇಳಿದ್ದನ್ನೆಲ್ಲ ನಾನು ಯಾವುದೇ ಒತ್ತಡವಿಲ್ಲದೆ ಕೇಳಿಸಿಕೊಂಡೆ. ಅವರು ನನಗೆ ಸಹಾಯ ಮಾಡಲು ಒಪ್ಪಿದ್ದಾರೆ. ಇದನ್ನು ಹೊಸ ಯೋಜನೆ ಎಂದು ಪರಿಗಣಿಸಲು ಅವರು ನನ್ನನ್ನು ಕೇಳೀದ್ದಾರೆ ಎಂದು ನಟ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top