fbpx
ಸಮಾಚಾರ

‘ನರೇಂದ್ರ ಮೋದಿ’ ಸಿನಿಮಾ ನಿರ್ಮಾಪಕರಿಗೆ ಜೀವ ಬೆದರಿಕೆ!

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಳೆದ ವರ್ಷ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಮಾಡಲಾಗಿತ್ತು. ಅದರಲ್ಲಿ ಮೋದಿ ಅವರ ಪಾತ್ರವನ್ನು ನಟ ವಿವೇಕ್ ಓಬೆರಾಯ್‌ ಮಾಡಿದ್ದರು. ಕಳೆದ ವರ್ಷ ತೆರೆಕಂಡ ಈ ಸಿನಿಮಾ ಅಷ್ಟೇನೂ ಉತ್ತಮ ಗಳಿಕೆ ಮಾಡಿರಲಿಲ್ಲ. ಇದೀಗ ಅಕ್ಟೋಬರ್ 15ರಂದು ಪುನಃ ರಿಲೀಸ್ ಮಾಡುವುದಕ್ಕೆ ತಂಡ ಸಿದ್ಧವಾಗಿದೆ. ಆದರೆ, ಈ ಮಧ್ಯೆ ಚಿತ್ರದ ನಿರ್ಮಾಪಕರಿಗೆ ಜೀವ ಬೆದರಿಕೆ ಬಂದಿರುವ ಕುರಿತು ಸುದ್ದಿಯಾಗಿದೆ.

ಉದ್ಯಮಿ ಅಮಿತ್ ಬಿ ವಾಧ್ವಾನಿ ಮೋದಿ ಸಿನಿಮಾ ಸಹನಿರ್ಮಾಪಕರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಎದುರಿಸಿದ್ದಾರೆ. ತನಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬಂದಿದೆ ಎಂದು ನಿರ್ಮಾಪಕ ಮುಂಬೈ ಪೊಲೀಸ್ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ಆಪ್ಟಿಮಿಸ್ಟಿಕ್ಸ್ ಎಂಬ ಫೇಸ್‌ಬುಕ್‌ ಖಾತೆಯಿಂದ ಬೆದರಿಕೆ ಬಂದಿದೆ ಎಂದಿದ್ದಾರೆ.

‘ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂದು ಘೋಷಣೆ ಮಾಡಿದ್ದಕ್ಕಾಗಿ ಬೆದರಿಕೆ ಬಂದಿದೆ. ಅದೂ ಪ್ರಧಾನಮಂತ್ರಿ ಜೀವನಚರಿತ್ರೆ ಇದು ನನಗೆ ಆಘಾತವುಂಟುಮಾಡಿದೆ. ನನ್ನ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂದು ಹೇಳುವುದರಲ್ಲಿ ಏನು ಅತಿರೇಕ ಇರಲಿಲ್ಲ. ಕೆಟ್ಟ ಪ್ರಚಾರಕ್ಕಾಗಿ ನಮ್ಮನ್ನು ಗುರಿ ಮಾಡುವುದು ದುರದೃಷ್ಟಕರ’ ಎಂದು ಸಹ ನಿರ್ಮಾಪಕ ಅಮಿತ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top