fbpx
ಸಮಾಚಾರ

ಸುಶಾಂತ್ ಸ್ನೇಹಿತನಿಂದ ಅರ್ನಬ್ ಗೋಸ್ವಾಮಿ ವಿರುದ್ಧ ರೂ.200 ಕೋಟಿ ಮಾನನಷ್ಟ ಮೊಕದ್ದಮೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಸಂದೀಪ್ ಸಿಂಗ್ ಅವರು ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮಾನನಷ್ಟ ಆರೋಪದ ಮೇಲೆ ಲೀಗಲ್ ನೋಟಿಸ್ ಕಳುಹಿಸಿದ್ದು, 200 ಕೋಟಿ ರೂ. ಪರಿಹಾರ ಕೇಳಿದ್ದಾರೆ.

ಅರ್ನಬ್ ಅವರ ಸಹೋದ್ಯೋಗಿಗಳು ತಮ್ಮಿಂದ ಹಣ ವಸೂಲಿ ಮಾಡಲು “ಕ್ರಿಮಿನಲ್ ಉದ್ದೇಶ”ದಿಂದ ಸಂದೇಶಗಳನ್ನು ಕಳುಹಿಸಿದ್ದರು ಎಂದು ಸಿಂಗ್ ಅವರು ತಮ್ಮ ಕಾನೂನು ನೋಟಿಸಿನಲ್ಲಿ ಆರೋಪಿಸಿದ್ದಾರೆ. ಈ ಕಾನೂನು ನೋಟಿಸನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲೂ ಶೇರ್ ಮಾಡಿದ್ದು ಇದೀಗ ಗೋಸ್ವಾಮಿ ಮತ್ತವರ ಟಿವಿ ವಾಹಿನಿಗೆ ಮಾಡಿದ ತಪ್ಪಿಗೆ ಬೆಲೆ ತೆರುವ ಸಮಯ ಎಂದೂ ಅದರಲ್ಲಿ ಅವರು ಹೇಳಿದ್ದಾರೆ.

 

View this post on Instagram

It's Payback time @republicworld #Defamation #EnoughIsEnough

A post shared by Sandip Ssingh (@officialsandipssingh) on

 

“ನಿಮ್ಮ ಮೇಲಿನ ಹೇಳಿಕೆಗಳು, ಚರ್ಚೆಗಳು, ಕಾರ್ಯಕ್ರಮಗಳು, ನಿಮ್ಮ ಟಿವಿ ಚಾನೆಲ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಸಲಾದ ಸುದ್ದಿ ಲೇಖನಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ ಅಡಿಯಲ್ಲಿ ನಾಗರಿಕ ಮತ್ತು ಅಪರಾಧಿ ಇಬ್ಬರಿಗೂ ಮಾನಹಾನಿಯಾಗಿದೆ ಎಂದು ಪ್ರಮುಖ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top