fbpx
ಸಮಾಚಾರ

“ಎಬಿಡಿ ಮತ್ತು ಕೊಹ್ಲಿಯನ್ನು IPLನಿಂದ ಬ್ಯಾನ್ ಮಾಡಿ” ಪಂಜಾಬ್ ನಾಯಕ ಕೆಎಲ್ ರಾಹುಲ್ ಹೇಗೆ ಹೇಳಿದ್ಯಾಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಮುಖ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ನಿಷೇಧಿಸುವಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ ಸಂಘಟಕರಿಗೆ ಸೂಚಿಸಲು ಬಯಸಿದ್ದಾರೆ.

ಇನ್‌ಸ್ಟಾಗ್ರಾಂ ಸಂವಾದದಲ್ಲಿ ಬುಧವಾರ ಮಾತನಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಆರ್.ರಾಹುಲ್ ತಮಾಷೆಗೆ, “ಐಪಿಎಲ್ ಆಯೋಜಕರು ಕೊಹ್ಲಿ ಹಾಗೂ ಡಿವಿಲಿಯರ್ಸ್‌ ಅವರನ್ನು ನಿಷೇಧಿಸಬೇಕು ಎಂದು ನಾನು ಬಯಸುತ್ತೇನೆ” ಎಂದು ಹೇಳಿದರು.

 

 

“ಮುಂದಿನ ವರ್ಷ ನಿಮ್ಮನ್ನು ಮತ್ತು ಎಬಿಯನ್ನು ನಿಷೇಧಿಸುವಂತೆ ಐಪಿಎಲ್ ಅನ್ನು ಕೇಳುತ್ತೇನೆ. ನೀವು ಒಂದು ನಿರ್ದಿಷ್ಟ ಪ್ರಮಾಣದ ರನ್ ಗಳಿಸಿದ್ದೀರಿ, ‘ಇದು ಸಾಕು’ ಎಂದು ಅನಿಸುತ್ತದೆ. ನೀವು 5,000 ರನ್ ಗಳಿಸಿದ್ದೀರಿ, ಈಗ ನೀವು ಇತರರಿಗೆ ಆಡಲು ಅವಕಾಶ ನೀಡಿ” ಎಂದು ಕೆ.ಎಲ್ ರಾಹುಲ್ ತಮಾಷೆಯಾಗಿ ಹೇಳಿದ್ದಾರೆ.

ಅಂದಹಾಗೆ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎ.ಬಿ.ಡಿವಿಲಿಯರ್ಸ್‌ ಜೋಡಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ನಿರಂತರ ಉತ್ತಮ ಪ್ರದರ್ಶನದಿಂದಾಗಿ ಈ ಆಟಗಾರರು ಈ ಪೀಳಿಗೆಯ ಅತ್ಯುತ್ತಮ ಬ್ಯಾಟಿಂಗ್ ಪ್ರತಿಭೆಗಳು ಎನಿಸಿಕೊಂಡಿದ್ದಾರೆ. ಇವರ ದಾಖಲೆ ಜತೆಯಾಟಗಳು ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top