fbpx
ಸಮಾಚಾರ

ಭಾರತಕ್ಕೆ ಮೊದಲ ಆಸ್ಕರ್ ತಂದುಕೊಟ್ಟಿದ್ದ ಭಾನು ಅಥೈಯಾ ವಿಧಿವಶ

ಭಾರತದ ಮೊದಲ ಆಸ್ಕರ್ ಪ್ರಶಸ್ತಿ ಪುರಸ್ಕೃತೆ, ವಸ್ತ್ರ ವಿನ್ಯಾಸಕಿ ಭಾನು ಅಥೈಯಾ ದೀರ್ಘಕಾಲದ ಅನಾರೋಗ್ಯದಿಂದಾಗಿ ಗುರುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

1983 ರ ಚಲನಚಿತ್ರ ಗಾಂಧಿ ಚಿತ್ರದಲ್ಲಿನ ಕೆಲಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದ ಅಥೈಯಾ ನಿದ್ರೆಯಲ್ಲಿ ಶಾಂತಿಯುತವಾಗಿ ನಿಧನರಾದರು ಎಂದು ಅವರ ಮಗಳು ರಾಧಿಕಾ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.ಅವರ ಅಂತಿಮ ವಿಧಿ ವಿಧಾನಗಳು ದಕ್ಷಿಣ ಮುಂಬೈನ ಚಂದನ್ವಾಡಿ ಶವಾಗಾರದಲ್ಲಿ ನಡೆದವು.

ಮೂಲಗಳ ಪ್ರಕಾರ ಭಾನು ಅವರ ಮೆದುಳಿನಲ್ಲಿ ಗೆಡ್ಡೆಯೊಂದು ಬೆಳೆದಿತ್ತು, ಕಳೆದ ಮೂರು ವರ್ಷಗಳಿಂದ, ಅವರು ಹಾಸಿಗೆ ಹಿಡಿದಿದ್ದರು, ಅಲ್ಲಗೆ ಅವರ ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ತುತ್ತಾಗಿತ್ತು ಎಂದು ಹೇಳಲಾಗಿದೆ.

1983 ರ ಚಲನಚಿತ್ರ ಗಾಂಧಿ ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಭಾನು ಅವರಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿತ್ತು. ಕೊಲ್ಹಾಪುರದಲ್ಲಿ ಜನಿಸಿದ ಭಾನು ಅಥೈಯಾ, ಗುರು ದತ್ ಅವರ 1956 ರ ಸೂಪರ್ ಹಿಟ್ “ಸಿ.ಐ.ಡಿ.” ಯೊಂದಿಗೆ ಹಿಂದಿ ಚಿತ್ರರಂಗದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜಾನ್ ಮೊಲ್ಲೊ ಅವರೊಂದಿಗೆ ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’ ಚಿತ್ರದಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top