fbpx
ಸಮಾಚಾರ

ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್! ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ನಾಯಕ ಆಯ್ಕೆ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಮುಂದೆ ಕೆಕೆಆರ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಲಿದ್ದಾರೆ.

ಈ ಬಗ್ಗೆ ಕೆಕೆಆರ್ ಫ್ರಾಂಚೈಸಿ ಖಚಿತ ಪಡಿಸಿದ್ದು, ಬ್ಯಾಟಿಂಗ್​ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ದಿನೇಶ್ ಕಾರ್ತಿಕ್ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹಾಗೂ ಅನುಭವಿ ಆಟಗಾರ ಇಯಾನ್ ಮಾರ್ಗನ್ ಅವರಿಗೆ ಕೆಕೆಆರ್ ಕ್ಯಾಪ್ಟನ್ ಪಟ್ಟ ನೀಡಲಾಗಿದೆ ಎಂದು ಹೇಳಿದೆ.

 

 

“ದಿನೇಶ್ ಕಾರ್ತಿಕ್ ಅವರು ಕೆಕೆಆರ್ ಮ್ಯಾನೇಜ್ ಮೆಂಟದ ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಬ್ಯಾಟಿಂಗ್ ಬಗ್ಗೆ ಗಮನ ಹರಿಸುವ ಮತ್ತು ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಉದ್ದೇಶದಿಂದ, ನಾಯಕತ್ವವನ್ನು ಇಯಾನ್ ಮಾರ್ಗನ್ ಗೆ ಹಸ್ತಾಂತರಿಸಲು ಬಯಸಿದ್ದಾರೆ” ಎಂದು ಕೆಕೆಆರ್ ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ತಿಕ್ ಅವರು 2018 ರಲ್ಲಿ ಕೆಕೆಆರ್ ತಂಡಕ್ಕೆ ನಾಯಕನಾಗಿ ಆಯ್ಕೆ ಆದರು. ಈ ಸಂದರ್ಭ ತಂಡ ನಾಕೌಟ್ ತಲುಪಿತ್ತು. ಇನ್ನೂ 2019ರ ಸೀಸನ್​ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಡಪಬೇಕಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top