fbpx
ಸಮಾಚಾರ

ಜೂನಿಯರ್​ ಚಿರು ಸ್ವಾಗತಿಸಲು ಸಜ್ಜಾದ ಸರ್ಜಾ ಕುಟುಂಬ: ವಿಶೇಷ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ!

ನಾಳೆ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಅಲ್ಲದೆ ಮೇಘನಾ ಸರ್ಜಾ ಸಹ ತುಂಬು ಗರ್ಭಿಣಿ. ಇತ್ತೀಚೆಗಷ್ಟೆ ಅವರಿಗೆ ಎರಡು ಸಲ ಸೀಮಂತ ಕಾರ್ಯ ಮಾಡಲಾಗಿತ್ತು. ಇನ್ನು ಮೇಘನಾರಿಗಾಗಿಯೇ ಒಂದು ವಿಶೇಷ ವಿಡಿಯೋ ಮಾಡಿದ್ದಾರೆ ಚಿರು ಅವರ ಕುಟುಂಬವರು. ಅದನ್ನು ಧ್ರುವ ಸರ್ಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

 

ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿರುವ ಧ್ರುವ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ನ್ನು ಸರ್ಜಾ ಕುಟುಂಬದ ಬಹುತೇಕರಿಗೆ ಟ್ಯಾಗ್ ಮಾಡಲಾಗಿದ್ದು, ಕೊನೆಗೆ ಜೈ ಹನುಮಾನ್ ಎಂದಿದ್ದಾರೆ.

ವಿಡಿಯೋದಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿದ್ದು, ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಹೇಳುತ್ತಿರುವುದನ್ನು ಗಮನಿಸಬಹುದಾಗಿದೆ. ಮಾತ್ರವಲ್ಲ ಮೇಘನಾರಾಜ್ ಸೀಮಂತ ಕಾರ್ಯದ ಕೆಲ ಚಿತ್ರಣವನ್ನು ಸಹ ನೀಡಲಾಗಿದೆ. ಧ್ರುವ ಜನ್ಮದಿಂದ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿರುವ ಕುರಿತು ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top