fbpx
ಸಮಾಚಾರ

3ನೇ ಮದುವೆಯಾದ WWE ಸೂಪರ್ ಸ್ಟಾರ್ ಜಾನ್ ಸೀನ

WWE ಸೂಪರ್ ಸ್ಟಾರ್ ಜಾನ್ ಸಿನಾ ಅವರು ಮೂರನೇ ಬಾರಿಗೆ ವಿವಾಹವಾಗಿದ್ದು, ತಮ್ಮ ಗೆಳತಿ ಶೇ ಶರಿಯತ್‍ಜಾಡೆ ಅವರನ್ನು ಮದುವೆಯಾಗಿದ್ದಾರೆ.

ತಮ್ಮ ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆಗೆ ಜಾನ್‌ಸೀನಾ ಪ್ಲೋರಿಡಾದಲ್ಲಿ ಈ ಜೋಡಿ ಗೌಪ್ಯವಾಗಿ ಮದುವೆಯಾಗಿದ್ದು ಈ ವಿಚಾರವನ್ನು ಅವರು ಬಹಿರಂಗಗೊಳಿಸಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು ಅಧಿಕೃತ ದಾಖಲೆಗಳೊಂದಿಗೆ ಈ ಸುದ್ದಿಯನ್ನು ಖಚಿತಪಡಿಸಿದೆ.

ಜಾನ್‌ಸೀನಾ ಅದಕ್ಕು ಮೊದಲು 2009ರಲ್ಲಿ ಎಲಿಜಬೆತ್ ಹುಬರ್ಡ ಜೊತೆಗೆ ವಿವಾಹವಾಗಿದ್ದರು. 2012ರ ವರೆಗೆ ಎಜಿಜಬೆತ್ ಜೊತೆಗೆ ಸಂಸಾರ ನಡೆಸಿದ್ದ ಜಾನ್ ಸೀನ ಬಳಿಕ ವಿಚ್ಛೇದನವನ್ನು ಪಡೆದು ಬೇರೆಯಾಗಿದ್ದರು.

ಇದಾದ ನಂತರ ಸಿನಾ ಡಬ್ಯ್ಲುಡಬ್ಯ್ಲುಇದ ಲೇಡಿ ಕುಸ್ತಿಪಟು ನಿಕ್ಕಿ ಬೆಲ್ಲಾ ಅವರ ಜೊತೆ ಡೇಟಿಂಗ್‍ನಲ್ಲಿ ಇದ್ದರು. ಸುಮಾರು ಐದು ವರ್ಷಗಳ ಕಾಲ ಜೊತೆಗಿದ್ದ ಸಿನಾ ಮತ್ತು ನಿಕ್ಕಿ ಬೆಲ್ಲಾ ಜೋಡಿ 2018ರಲ್ಲಿ ತಾವು ಬೇರೆಯಾಗುತ್ತೇವೆ ಎಂದು ಘೋಷಿಸಿಕೊಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top