fbpx
ಸಮಾಚಾರ

ಹೊಸ ಕ್ಲೈಮ್ಯಾಕ್ಸ್ ನೊಂದಿಗೆ ರೀ-ರೀಲೀಸ್ ಆಗುತ್ತಿರುವ ‘ದಿಯಾ’

ಕೊರೋನಾ ಲಾಕ್ ಡೌನ್ ಕಾರಣಕ್ಕೆ ಅನೇಕ ಸದಭೀರುಚಿಯ ಚಿತ್ರಗಳನ್ನು ಪ್ರೇಕ್ಷಕರು ಅನಿವಾರ್ಯವಾಗಿ ಆನ್ ಲೈನ್ ನಲ್ಲಿ ವೀಕ್ಷಿಸಬೇಕಾಗಿ ಬಂತು. ಅಂಥದ್ದೇ ಒಂದೊಳ್ಳೆ ಸಿನಿಮಾ ದಿಯಾ. ಈ ಚಿತ್ರ ಮನೋಡಿದವರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅದೆ ದಿಯಾ ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆ ಕಾಣಲಿದೆ.

ಈಗಾಗಲೇ ಈ ಚಿತ್ರವನ್ನು ನೋಡಿರುವವರು ಮತ್ತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಈಗೊಂದು ಹೊಸ ಕಾರಣ ಸಿಕ್ಕಿದೆ. ಅದೇನೆಂದರೆ, ‘ದಿಯಾ’ ಕ್ಲೈಮ್ಯಾಕ್ಸ್‌ ಬದಲಾಗಿದೆ! ಹೌದು, ಅಚ್ಚರಿ ಎನಿಸಿದರೂ ಇದು ನಿಜ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಪ್ರೇಮಿ ಸಾಯುವ ಮೂಲಕ ಕಥೆ ಅಂತ್ಯವಾಗಿತ್ತು. ಈ ಬಗ್ಗೆ ಕೆಲ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದರು ಕೂಡ. ಈಗ ಆ ಕಥೆಯೇ ಬದಲಾಗಿದೆ.

ಕ್ಲೈಮ್ಯಾಕ್ಸ್‌ ಬದಲಾವಣೆ ಜೊತೆಗೆ ಸೂಪರ್‌ ಹಿಟ್‌ ‘soul of dia’ ಹಾಡನ್ನು ಹೊಸದಾಗಿ ಸೇರಿಸಲಾಗಿದೆ. ಈ ಮೊದಲು ಚಿತ್ರ ತೆರೆಕಂಡಾಗ ಅದರಲ್ಲಿ ಈ ಹಾಡು ಇರಲಿಲ್ಲ.

ಈಗ ದಿಯಾ ಸಿನಿಮಾದ ಹೊಸ ಕ್ಲೈಮ್ಯಾಕ್ಸ್​ ಏನಾಗಲಿದೆ ಎಂದು ಪ್ರೇಕ್ಷಕರು ಊಹಿಸೋಕೆ ಆರಂಭಿಸಿದ್ದಾರೆ. ದಿಯಾ ಸಿನಿಮಾದಲ್ಲಿ ಆದಿ ಜೀವಂತವಾಗಿರುತ್ತಾನಾ..? ಆದಿಗೆ ದಿಯಾ ಸಿಗುತ್ತಾಳಾ..? ಅಥವಾ ಮತ್ತೇನಾದರೂ ಟ್ವಿಸ್ಟ್ ಕಾದಿದೆಯಾ ಅನ್ನೋ ಪ್ರಶ್ನೆಗೆ ಉತ್ತರ ಅ.23ರಂದು ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top