fbpx
ಸಮಾಚಾರ

“ನನ್ನ ಮಗುವಾಗಿ ಚಿರು ಯಾವಾಗ ಬರಬೇಕು ಅಂತಾರೋ ಆವಾಗ ಬರಲಿ” ಮೇಘನಾ ರಾಜ್

ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಆಚರಣೆಯಲ್ಲಿರುವ ತುಂಬು ಗರ್ಭಿಣಿ ಪತ್ನಿ ಮೇಘನಾ ರಾಜ್ ಇಂದು ಪತಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಅವರು ‘ಚಿರು ನನ್ನ ಮಗುವಾಗಿ ಯಾವಾಗ ಬರಬೇಕು ಅಂತಾರೋ ಆವಾಗ ಬರಲಿ’ ಎಂದು ಹೇಳಿದ್ದಾರೆ.

ಮಗುವಿನ ವಿಚಾರ ಕೇಳಿದಾಗ, ” ಚಿರು ಮತ್ತೆ ಮಗುವಿನ ರೂಪದಲ್ಲಿ ಜನ್ಮ ತಾಳುತ್ತಾರೆ. ಆದರೆ ಯಾವಾಗ ಭೂಮಿಗೆ ಬರಬೇಕು ಎಂದು ಚಿರು ಅವರೇ ಇಚ್ಚಿಸಬೇಕು. ನಾನೇನೂ ಹೇಳಕ್ಕಾಗಲ್ಲ ಎಂದರು. ಚಿರು ಜನ್ಮದಿನದಂದ್ಲೇ ಭೂಮಿಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಆದ್ರೂ ಆಗಬಹುದು ನನಗೆ ಗೊತ್ತಿಲ್ಲ” ಎಂದು ಮೇಘನಾ ಹೇಳಿದರು.

ಸೀಮಂತ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಚಿರು ಅವರ ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ ಒಟ್ಟಾರೆ ನಮ್ಮ ಕುಟುಂಬ ಅದನ್ನು ನನಸು ಮಾಡಿದೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗಂತೂ ಸಿಕ್ಕಾಪಟ್ಟೆನೆ ಖುಷಿಯಾಗಿರುತ್ತೆ ಎಂದು ಹರ್ಷ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top