fbpx
ಸಮಾಚಾರ

ಇಂದು ಚಿರು ಸರ್ಜಾ ಹುಟ್ಟುಹಬ್ಬ: ವಿಶೇಷ ವಿಡಿಯೋ ಹಂಚಿಕೊಂಡ ಮೇಘನಾ ರಾಜ್

ಇಂದು ಸ್ಯಾಂಡಲ್‌ವುಡ್‌ ಯುವ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸವಿ ನೆನಪು, ಅವರಿಗೆ 35 ವಸಂತಗಳು ತುಂಬುತ್ತಿತ್ತು. ಸದ್ಯ ಇಂದು, ಚಿರು ಹುಟ್ಟುಹಬ್ಬದಂದು ಮೇಘನಾ ತಮ್ಮ ಸೀಮಮಂತದ ವಿಡಿಯೋ ತಮ್ಮ ಇನ್ಸ್ಟ್ಆಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 

 

View this post on Instagram

 

@shalinismakeupprofile @makeover_by_raghu_nagaraj_n @classycaptures_official

A post shared by Meghana Raj Sarja (@megsraj) on

 

ತಮ್ಮ ಇನ್‍ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಮೇಘನಾ, ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಜೂ. ಚಿರುವಿಗೆ ಸ್ವಾಗತ ಕೋರಿ ಕುಟುಂಬಸ್ಥರು ಮಾಡಿರುವ ವೀಡಿಯೋವನ್ನು ಕೂಡ ಮೇಘನಾ ಹಾಗೂ ಧ್ರುವ ಸರ್ಜಾ ಶೇರ್ ಮಾಡಿಕೊಂಡಿದ್ದರು.

ಚಿರು ನಿಧನರಾದ ನಂತರ ಇಂದು ಅವರ ಮೊದಲ ಹುಟ್ಟುಹಬ್ಬವಾಗಿದೆ. ಹೀಗಾಗಿ ನೆಲಗುಳಿಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರು ಚಿರು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಚಿರಂಜೀವಿ ಸಮಾಧಿ ಬಳಿ ಚಿರಂಜೀವಿ ಸರ್ಜಾ ಅಜ್ಜಿ ಲಕ್ಷ್ಮಿ ದೇವಿ ಆಗಮಿಸಿ, ಮೊಮ್ಮಗನ ಸ್ಮಾರಕ್ಕೆ ಹೂವು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top