fbpx
ಸಮಾಚಾರ

7 ತಿಂಗಳ ನಂತರ ಏಕತಾ ಪ್ರತಿಮೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ: ಷರತ್ತುಗಳು ಅನ್ವಯ

ಕೊರೊನಾ ವೈರಸ್ ಪಿಡುಗಿನಿಂದಾಗಿ 7 ತಿಂಗಳ ಕಾಲ ಬಂದ್ ಆಗಿದ್ದ ಗುಜರಾತ್‍ನ ನರ್ಮದಾ ನದಿತಟದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್-19 ಮಾರ್ಗ ಸೂಚಿಗಳಿಗೆ ಒಳಪಟ್ಟು ಪ್ರವಾಸಿಗರಿಗೆ ಮುಕ್ತವಾಗಿದೆ.

7 ತಿಂಗಳಿಗಿಂತ ಹೆಚ್ಚು ವಿರಾಮದ ನಂತರ ವಿಶ್ವದ ಅತಿ ಎತ್ತರದ ಪ್ರತಿಮೆ ಗುಜರಾತಿನ “ಏಕತಾ ಪ್ರತಿಮೆ” ಇಂದಿನಿಂದ (ಅಕ್ಟೋಬರ್ 17) ಸಾರ್ವಜನಿಕರಿಗೆ ಮುಕ್ತವಾಗಲಿದೆ. ನವರಾತ್ರಿ ಪ್ರಾರಂಭದ ಶುಭದಿನದಂದು ಏಕತಾ ಪ್ರತಿಮೆಗೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸಲುಒಂದಿ ದಿನಕ್ಕೆ ಗರಿಷ್ಠ 2,500 ಪ್ರವಾಸಿಗರಿಗೆ ಮಾತ್ರ ಪ್ರತಿಮೆ ವೀಕ್ಷಣೆಗೆ ಅವಕಾಶ ಒದಗಿಸಲಾಗುತ್ತಿದೆ. ಅದರಲ್ಲಿಯೂ ಒಮ್ಮೆಗೆ ಕೇವಲ 500 ಮಂದಿಗೆ ಮಾತ್ರ 193 ಮೀಟರ್ ಎತ್ತರದಲ್ಲಿರುವ ವೀಕ್ಷಣಾ ಗ್ಯಾಲರಿಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.

ಅಧಿಕೃತ ಟಿಕೆಟಿಂಗ್ ವೆಬ್‌ಸೈಟ್ www.soutickets.in ನಿಂದ ಎರಡು ಗಂಟೆಗಳ ಸ್ಲಾಟ್‌ಗಳಲ್ಲಿ ಟಿಕೆಟ್‌ ಗಳನ್ನು ಬುಕ್ ಮಾಡಬಹುದಾಗಿದೆ. ಇದರ ಹೊರತಾಗಿ ಪ್ರವಾಸಿ ತಾಣದಲ್ಲಿ ಇರುವ ಟಿಕೆಟ್ ಕೌಂಟ್ಅರ್ ಗಳಲ್ಲಿ ಯಾವ ಟಿಕೆಟ್ ಗಳನ್ನು ನೀಡಲಾಗುವುದಿಲ್ಲ. ಮಾಸ್ಕ್ ಧರಿಸುವುದು, ಕೈ ನೈರ್ಮಲ್ಯ ಮತ್ತು ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು ಮುಂತಾದ ಎಲ್ಲಾ ಮೂಲ ಕೋವಿಡ್ ಪ್ರೋಟೋಕಾಲ್‌ಗಳನ್ನು ಸಂದರ್ಶಕರು ಅನುಸರಿಸುವುದು ಕಡ್ಡಾಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top