fbpx
ಸಮಾಚಾರ

ಕೋಮು ದ್ವೇಷ ಹರಡುವ ಪ್ರಯತ್ನ; ಕಂಗನಾ ವಿರುದ್ಧ ದೂರು ದಾಖಲಿಸಲು ಕೋರ್ಟ್​ ಸೂಚನೆ

ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಅವರ ಸಹೋದರಿ ರಂಗೋಲಿ ಚಂಡೇಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಾಂದ್ರಾ ಕೋರ್ಟ್ ಆದೇಶ ನೀಡಿದೆ. ಬಾಂದ್ರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಆದೇಶ ಹೊರಡಿಸಿದೆ. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ನಡುವೆ ಕೋಮು ಸೌಹಾರ್ದ ಕದಡಿದ ಆರೋಪ ಬಾಲಿವುಡ್ ಸೆಲೆಬ್ರಿಟಿ ಸಹೋದರಿಯರ ಮೇಲಿದೆ.

ವಿನ್ಯಾಸಕ ಹಾಗೂ ಫಿಟ್ನೆಸ್ ತರಬೇತುದಾರ ಮುನ್ನಾವರಲಿ ಸಯ್ಯದ್ ನೀಡಿದ ದೂರಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಜಯದೇವ್ ಘುಲೆ ಈ ಆದೇಶವನ್ನು ನೀಡಿದ್ದಾರೆ.

ಐಪಿಎಲ್ ಸೆಕ್ಷನ್ 153 ಎ( ವಿವಿಧ ಗುಂಪುಗಳ ನಡುವೆ ಶತ್ರುತ್ವಕ್ಕೆ ಪ್ರಚೋದನೆ) 295 ಎ( ಧರ್ಮವನ್ನು ಅಪಮಾನಿಸುವ ಮೂಲಕ ಕೋಮು ಭಾವನೆ ಕೆರಳಿಸುವ ಚಟುವಟಿಕೆ) ಮತ್ತು 124ಎ ಅನ್ವಯ ದೇಶದ್ರೋಹದ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕೆಂದು ಸಯ್ಯದ್ ದೂರಿನಲ್ಲಿ ಕೇಳಿಕೊಂಡಿದ್ದರು. ಅಲ್ಲದೇ ಇದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಒದಗಿಸಲಾಗಿತ್ತು.

ದೂರನ್ನು ಪುರಸ್ಕರಿಸಿರುವ ನ್ಯಾಯಾಲಯ ಸಂಬಂಧಪಟ್ಟ ಪೊಲೀಸ್​ ಠಾಣೆಗೆ ಅಗತ್ಯ ಕ್ರಮವನ್ನು ಅನುಸರಿಸಿ ತನಿಖೆ ಮಾಡುವಂಥೆ ಸೂಚನೆ ನೀಡಿದೆ. ಕಂಗನಾ ಮತ್ತು ಆಕೆ ಸಹೋದರಿ ಟ್ವೀಟರ್​, ಎಲೆಕ್ಟ್ರಾನಿಕ್​ ಮಾಧ್ಯಮಗಳ ಸಂದರ್ಶನ ಹೇಳಿಕೆಗಳ ಮೇಲೆ ಈ ಎಲ್ಲಾ ಆರೋಪಗಳಿವೆ. ಈ ಹಿನ್ನಲೆ ತಜ್ಞರಿಂದ ತನಿಖೆ ಅವಶ್ಯಕತೆ ಇದೆ ಎಂದು ನ್ಯಾಯಾಲಯ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top