fbpx
ಸಮಾಚಾರ

ಈ ವಾರದಿಂದ ಸಾಲು ಸಾಲು ರಜೆ:ಬ್ಯಾಂಕ್‌ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಿ

ಈ ವಾರ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಐದು ದಿನಗಳ ಸರಣಿ ರಜೆ ಇರುವುದುದರಿಂದ ಗ್ರಾಹಕರು ಆದಷ್ಟು ಬೇಗ ಯಾವುದೇ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮತ್ತು ಸರ್ಕಾರಿ ಕಚೇರಿಯಲ್ಲಿನ ಕೆಲಸಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆಗೆ ಎಟಿಎಂನಲ್ಲೂ ಹಣ ಲಭಿಸಲಿದೆಯೋ ಇಲ್ಲವೋ ಹೇಳಲಿಕ್ಕಾಗುವುದಿಲ್ಲ.

ಹಬ್ಬದ ಪ್ರಯುಕ್ತ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಇದ್ದು ಬ್ಯಾಂಕ್ ವ್ಯವಹಾರಗಳಿದ್ದರೆ ಇನ್ನೆರಡು ದಿನದಲ್ಲಿ ಮುಗಿಸಿಕೊಳ್ಳುವುದು ಉತ್ತಮ. ಶನಿವಾರದಿಂದ ಬ್ಯಾಂಕ್ ಗಳಿಗೆ ನಿರಂತರ ರಜೆ ಇರಲಿದ್ದು, ಸಾಲು ಸಾಲು ರಜೆ ಹಿನ್ನೆಲೆ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹಬ್ಬ ವಾರಾಂತ್ಯ ರಜೆಗಳ ಕಾರಣ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಕ್ಯಾಶ್ ವಿತ್ ಡ್ರಾ, ಠೇವಣಿ, ಚೆಕ್ ಮೊದಲಾದ ವ್ಯವಹಾರಗಳನ್ನು ಈಗಲೇ ಮುಗಿಸಿಕೊಳ್ಳುವುದು ಉತ್ತಮ

ಯಾವ ದಿನ ಏನು?
ಅ.24 – 4ನೇ ಶನಿವಾರ
ಅ.25 – ಭಾನುವಾರ(ಆಯುಧ ಪೂಜೆ)
ಅ.26 – ಸೋಮವಾರ(ವಿಜಯದಶಮಿ)
ಅ.30 – ಶುಕ್ರವಾರ (ಈದ್-ಮಿಲಾದ್)
ಅ. 31- ಶನಿವಾರ – ಮಹರ್ಷಿ ವಾಲ್ಮೀಕಿ ಜಯಂತಿ
ನ.1 ಭಾನುವಾರ – ಕನ್ನಡ ರಾಜ್ಯೋತ್ಸವ

ಸತತ ನಾಲ್ಕು ದಿನ ರಜೆ ಇರುವುದರಿಂದ ಎಟಿಎಂನಲ್ಲಿ ಕೂಡ ನಗದು ಸಮಸ್ಯೆಗಳನ್ನು ಎದುರಿಸಬಹುದು. ಏಕೆಂದರೆ, ಬ್ಯಾಂಕುಗಳು ಪ್ರತಿದಿನ ಕೂಡ ಎಟಿಎಂಗಳಿಗೆ ಹಣವನ್ನು ತುಂಬಿಸುತ್ತಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ರಜೆ ಎಟಿಎಂ ಭರ್ತಿ ಮಾಡುವಿಕೆಯಲ್ಲೂ ಸಹ ಪರಿಣಾಮ ಬೀರುತ್ತದೆ. . ನಾಲ್ಕುದಿನ ರಜೆ ಕಾರಣ ಗ್ರಾಹಕರು ಹಣಕ್ಕಾಗಿ ಪರಾಡಬೇಕಾದ ಅನಿವಾರ್ಯತೆ ಎದುರಾಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top