ಕಾಲಿವುಡ್ನ ಸ್ಟಾರ್ ಸಹೋದರರಾದ ಸೂರ್ಯ ಮತ್ತು ಕಾರ್ತಿ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ, ಈ ಕುಟುಂಬಕ್ಕೆ ಈಗ ಹೊಸ ಸದಸ್ಯ ಎಂಟ್ರಿ ನೀಡಿದ್ದಾನೆ! ಹೌದು, ನಟ ಕಾರ್ತಿ ಗಂಡು ಮಗುವಿಗೆ ಅಪ್ಪನಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಾರ್ತಿ ಪತ್ನಿ ರಂಜನಿ ಗರ್ಭಿಣಿಯಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಇದರಿಂದ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಈಗ ಆ ಖುಷಿಯನ್ನು ಡಬಲ್ ಮಾಡುವಂತೆ ಕಾರ್ತಿ ಮನೆಗೆ ಪುತ್ರನ ಎಂಟ್ರಿಯಾಗಿದೆ.
Dear friends and family, we are blessed with a boy baby. We can’t thank enough our doctors and nurses who took us through this life changing experience. 🙏🏽 need all your blessings for the little one. Thank you god!
— Actor Karthi (@Karthi_Offl) October 20, 2020
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ತಿ ಪತ್ನಿ ರಂಜನಿ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಾದ ಸಂತಸವನ್ನು ನಟ ಕಾರ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಪ್ರೀತಿಯ ಸ್ನೇಹಿತರೆ ಮತ್ತು ಕುಟಂಬದವರು, ನಮಗೆ ಗಂಡುವಾಗಿದೆ. ವೈದ್ಯರು ಮತ್ತು ದಾದಿಯರಿಗೆ ಧನ್ಯವಾದಗಳು. ನನ್ನ ಮುದ್ದು ಕಂದನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ’ ಎಂದು ಕಾರ್ತಿ ಟ್ವೀಟ್ ಮಾಡಿದ್ದಾರೆ.
2011ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರ್ತಿ ಹಾಗೂ ರಂಜನಿ 2013ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಆಕೆಯನ್ನು ಉಮಾಯಾಲ್ ಎಂದು ನಾಮಕರಣ ಮಾಡಲಾಗಿತ್ತು. ಏಳು ವರ್ಷಗಳ ನಂತರ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಕಾರ್ತಿ ಅಭಿಮಾನಿಗಳು ಹಾಗೂ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
