fbpx
ಸಮಾಚಾರ

ಮೇಘನಾಗೆ ಗಂಡು ಮಗು ಜನನ: ಚಿಕ್ಕಪ್ಪ ಧ್ರುವ ಸರ್ಜಾ ತೋಳಿನಲ್ಲಿ ಜೂ.ಚಿರು ಫೋಟೋ ವೈರಲ್

ಚಿರಂಜೀವಿ ಸಂರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದಾಗಿ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಗುವನ್ನು ಚಿರಂಜೀವಿ ತಮ್ಮ ಧ್ರುವಾ ಸರ್ಜಾ ಎತ್ತಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಗುವನ್ನ ಕೈಗೆತ್ತಿಕೊಮಡಿರುವ ಆ ಸಂಭ್ರಮ, ಆ ತೃಪ್ತಿ ಧ್ರುವ ಕಣ್ಣಲ್ಲಿ ಕಂಡು ಬರ್ತಿದೆ.

ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ ಹಾಗೂ ಚಿರು ತಾಯಿ ಅಮ್ಮಾಜಿ ಮೂರು ದಿನದಿಂದ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯಲ್ಲೇ ಇದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿರುವ ಚಿರು ಫ್ಯಾನ್ಸ್​ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಜನ್ಮದಿನ ಆಚರಣೆ ಮಾಡಿತ್ತು ಸರ್ಜಾ ಕುಟುಂಬ. ಅದೇ ದಿನವೇ ಮೇಘನಾಗೆ ಹೆರಿಗೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕೆಲ ದಿನ ಬಿಟ್ಟು ಜೂನಿಯರ್​ ಚಿರು ಆಗಮಿಸಿದ್ದಾನೆ. ವಿಶೇಷ ಎಂದರೆ, ಇಂದು ಚಿರು ಸರ್ಜಾ- ಮೇಘನಾ ನಿಶ್ಚಿತಾರ್ಥದ ದಿನ. ಅದೇ ದಿನವೇ ಮೇಘನಾಗೆ ಮಗುವಾಗಿದೆ.

ಜೂನ್ ನಲ್ಲಿ ಮೇಘನಾ ಪತಿ, ಸ್ಯಾಂಡಲ್ ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿಯಾಗಿದ್ದರು. ಸರ್ಜಾ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿಯಾಗಿದ್ದ ವಿಚಾರ ಹಂಚಿಕೊಂಡಿದ್ದು, ಚಿರು ಮತ್ತೆ ಹುಟ್ಟಿ ಬರಲಿದ್ದಾರೆ ಎಂದು ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top