ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ಆಡಿದಾಗಲೆಲ್ಲಾ ಅಭಿಮಾನಿಗಳಿಂದ ಟ್ರೋಲ್ ಆಗಿದ್ದೇ ಹೆಚ್ಚು. ಆದರೆ, ಇಷ್ಟು ದಿನಗಳ ಕಾಲ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಮೊಹಮದ್ ಸಿರಾಜ್ ನೆನ್ನೆಯ ಪಂದ್ಯದಲ್ಲಿ ತಮ್ಮ ಆಟದ ಮೂಲಕವೇ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕೆಕೆಆರ್ ವಿರುದ್ಧ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಬಹಳ ಭಿನ್ನ ಬೌಲರ್ ಆಗಿ ಕಾಣಿಸಿಕೊಂಡರು.
Md Siraj Today’s Match :-
•Overs – 2
•Runs – 0
•Maiden – 2
•Wkts – 3First time in this IPL a bowler to bowled 2 Maiden Overs in back to back.!! Wow Md Siraj 🙌!! #RCBvsKKR pic.twitter.com/jWf0E1jnmY
— Being HeartTicker▫️ (@IAMFKhan_Sufe) October 21, 2020
ಡಬಲ್ ವಿಕೆಟ್ ಮೇಡನ್ ಸಾಧನೆಯೊಂದಿಗೆ ಆರ್ಸಿಬಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಸಿರಾಜ್, ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ 2 ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ಹೊಸ ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಒಂದೂ ರನ್ ನೀಡದೆ ಮೂರು ವಿಕೆಟ್ ಕಿತ್ತ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
Only bowler to bowl 2️⃣ maiden overs in an IPL match! 🔥🔥🔥
Correction, MAIDEN WICKETS* 😎#PlayBold #IPL2020 #WeAreChallengers #Dream11IPL #KKRvRCB pic.twitter.com/eI89cP2fak
— Royal Challengers Bangalore (@RCBTweets) October 21, 2020
500 ರೂಪಾಯಿಗಾಗಿ ಕ್ಲಬ್ ಕ್ರಿಕೆಟ್ನಲ್ಲಿ ಆಡುತ್ತಿದ್ದ ಹೈದರಾಬಾದ್ನ ಬೌಲರ್ ಸಿರಾಜ್ ಇಂದು RCB ಗೆಲುವಿನ ರೂವಾರಿಯಾಗಿದ್ದಾರೆ. ಆಟೋ ಚಾಲಕನ ಮಗನಾಗಿರುವ ಸಿರಾಜ್, ಒಂದು ಕಾಲದಲ್ಲಿ ಸ್ಪೈಕ್ ಶೂ ಕೊಂಡುಕೊಳ್ಳಲು ಪರದಾಡುತ್ತಿದ್ದರು.
ಸಿರಾಜ್ ತುಂಬಾನೇ ಕಷ್ಟದ ದಿನವನ್ನು ನೋಡಿ ಬಂದವರು. ಅವರ ತಾಯಿ ಅನಕ್ಷರಸ್ಥೆ. ತಂದೆ ಆಟೋ ಚಾಲಕ. ಬಡತನ ಎಂಬುದು ಸಿರಾಜ್ ಹುಟ್ಟಿದಾಗಿನಿಂದಲೂ ಅವರಿಗೆ ಅಂಟಿಕೊಂಡೇ ಇತ್ತು. ನಂತರ ಅವರ ಬದುಕು ಬದಲಾಗಿದ್ದು, ಆರ್ಸಿಬಿ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಮೇಲೆಯೇ. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ಆಡಿದ ಮೇಲೆ ಸಿರಾಜ್ ಭಾರತ ತಂಡ ಪ್ರತಿನಿಧಿಸಿದ್ದರು. ಆರ್ಸಿಬಿ ಸೇರಿದ ನಂತರವೇ ಸಿರಾಜ್ ಹೈದರಾಬಾದ್ನಲ್ಲಿ ಹೊಸ ಮನೆ ಖರೀದಿಸಿದ್ದು.
ಇವರಿಗೆ ಯಾವುದೇ ನಿರ್ದಿಷ್ಟ ಅಕಾಡೆಮಿ ಅಥವಾ ಕೋಚ್ ಇರಲಿಲ್ಲ. 2015ರಲ್ಲಿ ಸ್ನೇಹಿತನ ಕರೆಯೊಂದಿಗೆ ಚಾರ್ಮಿನಾರ್ ಕ್ರಿಕೆಟ್ ಕ್ಲಬ್ಗೆ ತೆರಳಿದ ಸಿರಾಜ್, ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆಡಿದ ಮೊದಲ ಪಂದ್ಯದಲ್ಲಿಯೇ ಸಿರಾಜ್ ಐದು ವಿಕೆಟ್ಗಳನ್ನು ಪಡೆದುಕೊಂಡರು ಹಾಗೂ 23 ವಯೋಮಿತಿ ರಾಜ್ಯ ತಂಡದ ಸಂಭಾವ್ಯ ಪಟ್ಟಿಗೆ ಆಯ್ಕೆಯಾದರು. ಕುಟುಂಬದ ಬೆಂಬಲ ಹಾಗೂ ತನ್ನ ಅಣ್ಣನ ನೆರವಿನಿಂದ ಸಿರಾಜ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಯಶಸ್ವಿಯಾದರು.
2016-17ರ ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಲ್ಲಿ 41 ವಿಕೆಟ್ ಕಬಳಿಸಿ ಮಿಂಚಿದ್ದರಿಂದ ಐಪಿಎಲ್ನಲ್ಲೂ ಅವಕಾಶ ಪಡೆದಿದ್ದ ಸಿರಾಜ್, ತನಗೆ ಕ್ರಿಕೆಟ್ ಜೀವನ ಕಟ್ಟಿಕೊಡಲು ತಂದೆ ಮೊಹಮ್ಮದ್ ಗೌಸ್ ಮತ್ತು ತಾಯಿ ಶಬಾನ ಬೇಗಂ ಮಾಡಿರುವ ತ್ಯಾಗಗಳಿಗೆ ತಕ್ಕ ಪ್ರತಿಫಲ ನೀಡಲು ಬಯಸಿದ್ದರು. ಅವರ ಅಣ್ಣ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಆದರೆ ತನಗೆ ವಿದ್ಯೆ ತಲೆಹತ್ತದೆ ಕ್ರಿಕೆಟಿಗನಾದೆ. ವಿದ್ಯಾಭ್ಯಾಸ ಮುಂದುವರಿಸುವಂತೆ ಬೈಯ್ಯುತ್ತಿದ್ದ ತಾಯಿಯೇ ಈಗ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಿರಾಜ್ ಈ ಹಿಂದೊಮ್ಮೆ ಹೇಳಿದ್ದರು.
2018ರ ಆವೃತ್ತಿಗೆ ಆರ್ಸಿಬಿ 2.20 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆರ್ಸಿಬಿ ಪರ ಆಡಿದ ಮೊದಲ ಋತುವಿನಲ್ಲಿ ಸಿರಾಜ್ 11 ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದರು. ಆದರೆ, 2019ರ ಆವೃತ್ತಿಯಲ್ಲಿ ಸಿರಾಜ್ ಪ್ರದರ್ಶನ ನೆಲ ಕಚ್ಚಿತ್ತು. ಇದರಿಂದ ಬೇಸತ್ತಿದ್ದ ಅಭಿಮಾನಿಗಳು ಈತನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆದರೆ, 2020ರ ಆವೃತ್ತಿಯಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡ ಹೈದರಾಬಾದ್ ಮೂಲದ ವೇಗಿ, ಅದ್ಭುತ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
