ನೆನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಕೊಹ್ಲಿ ಸೈನ್ಯದ ಬೌಲರ್ಗಳು ಬೆಂಕಿಯ ಚೆಂಡನ್ನು ಉಗುಳುತ್ತಿದ್ದಾರೆ. ಅದರಲ್ಲೂ ಮೊಹಮ್ಮದ್ ಸಿರಾಜ್ ಹೊಸ ದಾಖಲೆ ಬರೆದಿದ್ದಾರೆ. ಒಂದೂ ರನ್ ಬಿಟ್ಟು ಕೊಡದೆಯೇ ಮೂರು ವಿಕೆಟ್ ಗಳಿಸಿವ ಮೂಲಕ ಐಪಿಎಲ್ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ಇದರೊಂದಿಗೆ ಎರಡು ಮೇಡನ್ ಓವರ್ ಮಾಡಿರುವ ಸಾಧನೆಗೂ ಪಾತ್ರರಾಗಿದ್ದಾರೆ.
Md Siraj Today’s Match :-
•Overs – 2
•Runs – 0
•Maiden – 2
•Wkts – 3First time in this IPL a bowler to bowled 2 Maiden Overs in back to back.!! Wow Md Siraj 🙌!! #RCBvsKKR pic.twitter.com/jWf0E1jnmY
— Being HeartTicker▫️ (@IAMFKhan_Sufe) October 21, 2020
ಕೆಕೆಆರ್ ಬ್ಯಾಟ್ಸ್ಮನ್ಗಳ ಪತನಕ್ಕೆ ಕಾರಣವಾಗಿದ್ದು ಮೊಹಮ್ಮದ್ ಸಿರಾಜ್. 2ನೇ ಓವರ್ ಬೌಲಿಂಗ್ ಮಾಡಲು ಬಂದ ಸಿರಾಜ್ ತನ್ನ ಮೊದಲ ಓವರ್ನ ಮೂರನೇ ಎಸೆತದಲ್ಲೇ ರಾಹುಲ್ ತ್ರಿಪಾಠಿಯನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲೇ ನಿತೀಶ್ ರಾಣ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಜೊತೆಗೆ ಈ ಓವರ್ ಮೇಡನ್ ಕೂಡ ಆಯಿತು. ಇನ್ನೂ ತನ್ನ 2ನೇ ಓವರ್ನಲ್ಲಿ ಅಪಾಯಕಾರಿ ಬ್ಯಾಟ್ಸ್ಮನ್ ಟಾಮ್ ಬಾಂಟನ್ ಅವರನ್ನು ಔಟ್ ಮಾಡಿ ಮೂರನೇ ವಿಕೆಟ್ ಕಿತ್ತರು. ಜೊತೆಗೆ ತನ್ನ 2ನೇ ಓವರ್ ಕೂಡ ಮೇಡನ್ ಮಾಡಿದರು.
Only bowler to bowl 2️⃣ maiden overs in an IPL match! 🔥🔥🔥
Correction, MAIDEN WICKETS* 😎#PlayBold #IPL2020 #WeAreChallengers #Dream11IPL #KKRvRCB pic.twitter.com/eI89cP2fak
— Royal Challengers Bangalore (@RCBTweets) October 21, 2020
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸತತ ಎರಡು ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಸೊನ್ನೆ ರನ್ ಗೆ ಮೂರು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಸಿರಾಜ್
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
