fbpx
ಸಮಾಚಾರ

ರತ್ನ ಖಚಿತ ಚಿನ್ನದ ‘ಅಂಬಾರಿ’ ಮೈಸೂರಿಗೆ ಬಂದಿದ್ದು ಹೇಗೆ ಗೊತ್ತಾ? ರೋಚಕ ಕಥೆ ಹಾಗೂ ಇತಿಹಾಸ ಓದಿ.

ವಿಶ್ವವಿಖ್ಯಾತ ಮೈಸೂರು ದಸರಾ ಎಂದಾಕ್ಷಣ ಎಲ್ಲರಿಗೂ ತಟ್ಟನೆ ನೆನಪಾಗುವುದು ಮೈಸೂರು ಅರಮನೆ, ಆನೆ, ಅಂಬಾರಿ…ಅದರಲ್ಲೂ ದಸರಾ ಉತ್ಸವದಲ್ಲಿ ಗಮನ ಸೆಳೆಯುವುದು ರತ್ನ ಖಚಿತ 750 ಕೆಜಿ ತೂಕದ ತಾಯಿಚಾಮುಂಡೇಶ್ವರಿಯ ಅಂಬಾರಿ ಎಲ್ಲರ ಕಣ್ಣು ಕುಕ್ಕುತ್ತದೆ. ಈ ಅಂಬಾರಿ ಹಿಂದಿನ ಕಥೆ ಬಹಳ ಆಸಕ್ತಿದಾಯಕವಾಗಿದೆ. ಸಾಕಷ್ಟು ಜನರಿಗೆ ಮೈಸೂರು ಅರಮನೆ, ದಸರಾ ಹಾಗೂ ಅಂಬಾರಿ ಹೊರುವ ಆನೆಯ ಇತಿಹಾಸದ ಕಥೆಗಳು ತಿಳಿದಿರುತ್ತದೆ. ಆದರೆ, ಅದೆಷ್ಟೋ ಮಂದಿಗೆ ‘ಅಂಬಾರಿ’ ಬಗೆಗಿನ ಇತಿಹಾಸ ಹಾಗೂ ಅದರ ಮೂಲವೇ ತಿಳಿದಿರೋದಿಲ್ಲ..

 

 

ಅಂಬಾರಿಯ ಇತಿಹಾಸ:
ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿರುವ ನಿಟ್ಟಿನಲ್ಲಿ ವಿಶ್ವವಿಖ್ಯಾತ ‘ಚಿನ್ನದ ಅಂಬಾರಿ’ ಯ ಇತಿಹಾಸ ಮತ್ತು ಮೂಲವನ್ನು ತಿಳಿಯೋಣ ಬನ್ನಿ. ಈ ರತ್ನ ಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿಯಲ್ಲಿ ಮೂಲತಃ ಇತ್ತು.. ದೇವಗಿರಿ ಅವನತಿ ಹೊಂದಿದ ನಂತರ ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕ ಎನ್ನುವವರಿಗೆ ಹಸ್ತಾಂತರ ಮಾಡಿ, ಕಾಪಾಡುವಂತೆ ಮನವಿ ಮಾಡಿಕೊಳ್ಳಲಾಯಿತು. ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಬಚ್ಚಿಟ್ಟನಂತೆ. ಹೀಗೆ ಅಂಬಾರಿಯು ದೇವಗಿರಿಯಿಂದ , ಬಳ್ಳಾರಿ ಬಳಿಯ ರಾಮದುರ್ಗ ಕೋಟೆಗೆ ಬಂದಿತು.

ನಂತರ ಮುಮ್ಮಡಿ ಸಿಂಗ ನಾಯಕನ ಮಗ ಕಂಪಿಲರಾಯ ರಾಜ್ಯ ವಿಸ್ತರಿಸಿ ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಾನೆ. ನಂತರ 1327ರಲ್ಲಿ ದೆಹಲಿ ಸುಲ್ತಾನರು ದಾಳಿಗೆ ತುತ್ತಾಗುವ ಕಂಪಿಲ ರಾಜ್ಯ ನಾಶವಾಗುತ್ತದೆ.. ಆಗ ರಾಜ್ಯದ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ‘ಹಕ್ಕ-ಬುಕ್ಕರು’ ಈ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ಅಲ್ಲಿಂದ ಓಡಿಹೋಗುತ್ತಾರೆ.

1336ರ ವೇಳೆಗೆ ದೆಹಲಿ ಸುಲ್ತಾನರ ಆಳ್ವಿಕೆ ಅವನತಿ ಹೊಂದಿದ ಬಳಿಕ ಪುನಃ ರಾಜ್ಯ ಸ್ಥಾಪಿಸುವುದಕ್ಕೆ ಹಕ್ಕ ಮುಂದಾಗುತ್ತಾನೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸುತ್ತಾನೆ. ಇದು ವಿಜಯನಗರ ಸಾಮ್ರಾಜ್ಯದ ಮೊದಲನೇ ರಾಜಧಾನಿ. ನಂತರ ಬುಕ್ಕನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪಿಸುತ್ತಾನೆ. ಆಗ ತಾವು ಹುತ್ತವೊಂದರಲ್ಲಿ ಮುಚ್ಚಿತ್ತಿದ್ದ ಅಂಬಾರಿಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ.

ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ನಂತರ ಅಂಬಾರಿಯ ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡುಲಾಗುತ್ತದೆ. ಕೆಲವು ವರ್ಷದ ನಂತರ ಶ್ರೀರಂಗಪಟ್ಟಣ, ಆದಾದ ನಂತರ ಅಂತಿಮವಾಗಿ ಮೈಸೂರಿಗೆ ಬರುತ್ತದೆ.. ಹೀಗೆ ‘ಅಂಬಾರಿ’ ಹಲವು ರೋಚಕತೆಯ ಮೂಲಕ ಇಂದು ಮೈಸೂರಿನಲ್ಲಿ ನೆಲೆಯೂರಿದ್ದು ಪ್ರತಿವರ್ಷ ವಿಜಯ ದಶಮಿಯ ಜಂಬೂ ಸವಾರಿಯಂದು ಎಲ್ಲರೂ ಅದನ್ನು ನೋಡಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top