fbpx
ಸಮಾಚಾರ

ಅಕ್ಟೋಬರ್ 29: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ: ಬೆಂಗಳೂರು
ಅಕ್ಟೋಬರ್ 29, 2020 ಗುರುವಾರ
ವರ್ಷ : 1942 ಶಾರ್ವರಿ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ತ್ರಯೋದಶೀ 3:15 pm
ನಕ್ಷತ್ರ : ಉತ್ತರಾ ಭಾದ್ರ 12:00 pm
ಯೋಗ : ಹರ್ಷನ 2:38 am
ಕರಣ : ತೈತುಲ 3:15 pm ಗರಿಜ 4:29 am

Time to be Avoided
ರಾಹುಕಾಲ : 1:29 pm – 2:56 pm
ಯಮಗಂಡ : 6:16 am – 7:42 am
ದುರ್ಮುಹುರ್ತ : 10:07 am – 10:53 am, 2:45 pm – 3:31 pm
ವಿಷ : 1:28 am – 3:16 am
ಗುಳಿಕ : 9:09 am – 10:36 am

Good Time to be Used
ಅಮೃತಕಾಲ : 6:38 am – 8:25 am
ಅಭಿಜಿತ್ : 11:40 am – 12:26 pm

Other Data
ಸೂರ್ಯೋದಯ : 6:12 am
ಸುರ್ಯಾಸ್ತಮಯ : 5:53 pm
ರವಿರಾಶಿ : ತುಲ
ಚಂದ್ರರಾಶಿ : ಮೀನ

 

 

 

 

ಮೇಷ (Mesha) 

 

 

 

ಕೆಲಸಗಳ ವಿಧಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಅಂತೆಯೇ ಮೇಲಧಿಕಾರಿಗಳು ಸಹ ಮಹತ್ತರ ಕೆಲಸಗಳಿಗೆ ನಿಮ್ಮಿಂದ ಸಲಹೆ, ಸೂಚನೆಗಳನ್ನು ಬಯಸುವರು. ಇದು ನಿಮಗೆ ಅದೃಷ್ಟವನ್ನು ತಂದುಕೊಡುವುದು.

 

 

ವೃಷಭ (Vrushabh)

 

ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು.

 

ಮಿಥುನ (Mithuna)

 

ನಿಮ್ಮ ಕೆಲವು ನಿರ್ಧಾರಗಳು ಬೇರೆಯವರಿಗಿಂತ ವಿಭಿನ್ನವಾಗಿರುತ್ತವೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಕಾಣುವಿರಿ.

 

ಕರ್ಕ (Karka)

 

ವೃತ್ತಿರಂಗದಲ್ಲಿ ಪ್ರಗತಿದಾಯಕ ಅನುಭವವಾಗಲಿದೆ. ಆರ್ಥಿಕವಾಗಿ ಧನಾಗಮನ ವಿದ್ದರೂ ಕೈಯಲ್ಲಿ ಕಾಸು ನಿಲ್ಲದು. ಶುಭ ಚಿಂತನೆಗಳಿಂದ ಸಮಾಧಾನ ತಂದೀತು. ದಿನಾಂತ್ಯ ಶುಭವಾರ್ತೆ ಇದೆ.

 

ಸಿಂಹ (Simha)

 

ವಿದ್ಯಾರ್ಥಿಗಳಿಗೆ ಶುಭಸಮಯ. ಸದುಪಯೋಗಿಸಿ ಕೊಳ್ಳಿ. ಧಾರ್ಮಿಕ ಕಾರ್ಯಗಳಿಗೆ ಓಡಾಟ ವಿರುತ್ತದೆ. ದಾಂಪತ್ಯದಲ್ಲಿ ಶುಭವಾರ್ತೆ ಇರುತ್ತದೆ. ಯಾವುದೇ ವಿಚಾರದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆಯಾದೀತು.

 

ಕನ್ಯಾರಾಶಿ (Kanya)

 

ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಪ್ರಯಾಣದಲ್ಲಿ ಹೆಚ್ಚಿನ ಕಾರ್ಯಗಳು ನಡೆದರೂ ಸಮಾಧಾನ ಸಿಗಲಾರದು. ದೇವತಾ ಕಾರ್ಯಗಳಿಗೆ ಧನವ್ಯಯವಾದೀತು. ಸಾಧ್ಯತೆಗಳನ್ನು ಬಲಪಡಿಸಿಕೊಳ್ಳಿ.

 

ತುಲಾ (Tula)

 

ವ್ಯಾಪಾರ ವ್ಯವಹಾರಗಳನ್ನು ಜಾಗ್ರತೆಯಿಂದ ನಡೆಸಬೇಕಾಗುತ್ತದೆ. ಸಾಂಸಾರಿಕವಾಗಿ, ಕೌಟುಂಬಿಕ ವಾಗಿ ಕೂಡಾ ಸಂತಸದ ವಾತಾವರಣ ನೆಮ್ಮದಿ ತರುತ್ತದೆ. ಅವಿವಾಹಿತರಿಗೆ ಸಿಹಿಸುದ್ಧಿ.

 

ವೃಶ್ಚಿಕ (Vrushchika)

 

ಪ್ರಯಾಣದಲ್ಲಿ ಕಾರ್ಯಸಿದ್ಧಿ ಇದೆ. ವೃತ್ತಿರಂಗದಲ್ಲಿ ಕ್ರಿಯಾಶೀಲತೆ ಗುರುತಿಸಲ್ಪಡುವುದು. ಸಾಂಸಾರಿಕವಾಗಿ ಧರ್ಮಪತ್ನಿಯ ಸಹಕಾರದಿಂದ ಹಾಗೂ ಸೂಕ್ತ ಸಲಹೆಗಳಿಂದ ಮುನ್ನಡೆ ತರುತ್ತದೆ.

 

ಧನು ರಾಶಿ (Dhanu)

 

ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ಸ್ನೇಹಿತರು ಮತ್ತು ಸಂಬಂಧಿಗಳು ಹೆಚ್ಚು ಸಮಯ ಕೇಳಿದರೂ ಈ ಜಗತ್ತಿನ ಬಾಗಿಲುಗಳನ್ನು ಮುಚ್ಚಿ ನಿಮಗೆ ನೀವೇ ಒಳ್ಳೆಯ ವೈಭೋಗ ನೀಡಿಕೊಳ್ಳುವುದೊಳ್ಳೆಯದು.

 

ಮಕರ (Makara)

 

ನಿಮ್ಮ ಅನಾರೋಗ್ಯದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಇನ್ನೂ ಉಲ್ಬಣಗೊಳ್ಳುವುದರಿಂದ ನಿಮ್ಮ ಗಮನವನ್ನು ಬೇರೆಡೆಗೆ ಕಾಯಿಲೆಯಿಂದ ತಿರುಗಿಸಲು ಏನಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ.

 

ಕುಂಭರಾಶಿ (Kumbha)

 

ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕೈಬಿಗಿ ಹಿಡಿಯುವುದು ಒಳ್ಳೆಯದು.

 

ಮೀನರಾಶಿ (Meena)

 

ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ , ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು. ಕೆಲವು ಪ್ರಸಂಗಗಳಲ್ಲಿ ಉಪಾಯದಿಂದ ತಪ್ಪಿಸಿಕೊಳ್ಳುವಿರಿ. ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ತೋರಬೇಕಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top