fbpx
ಸಮಾಚಾರ

ಕೊ’ಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ ವಿಶ್ವನಾಥ್​ ಬಂಧನ

ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್(52) ಬಂಧನವಾಗಿದೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಕೇಸ್​ನಲ್ಲಿ ವಿಶ್ವನಾಥ ಭಟ್ ಅರೆಸ್ಟ್​ ಆಗಿದ್ದಾರೆ.

ವಿಶ್ವನಾಥ್ ಭಟ್ 7 ಲಕ್ಷಕ್ಕೆ ಕೊಲೆಗೆ ಸುಪಾರಿ ನೀಡಿರುವ ಆರೋಪಗಳ ಬಲವಾದ ಹಿನ್ನೆಲೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ತಂದೆಯಿಂದ ದೂರವಾಗಿ ಎರಡು ವರ್ಷಗಳಿಂದ ಅನನ್ಯ ಭಟ್ ತಾಯಿ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಸೆಪ್ಟೆಂಬರ್ 20, 2020ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿ ಕೊಲೆಯಾಗಿತ್ತು. ಘಟನೆಗೆ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಗೆ ವಿಶ್ವನಾಥ್ ಭಟ್ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಕೊಲೆಗೆ ವಿಶ್ವನಾಥ್ ಭಟ್ ಗೆ ಗೆಳೆಯ ಸಿದ್ದರಾಜು ಸಾಥ್ ನೀಡಿದ್ದನು.

ಸುಪಾರಿ ನೀಡಿದ್ಯಾಕೆ? :
ಇನ್ನು ಕೊಲೆಗೆ ಪರಶಿವಮೂರ್ತಿಯ ಕಿರುಕುಳ ಕಾರಣ ಎನ್ನಲಾಗಿದೆ. ಪರಶಿವಮೂರ್ತಿ ಅವರು ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದರು. ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರು ಎಂಬ ಆರೋಪವಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ವಿಶ್ವನಾಥ್‌ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top