ಇತ್ತೀಚೆಗಷ್ಟೇ ದೆಹಲಿ ಬಾಬಾ ಕಾ ಧಾಭಾ ವೈರಲ್ ಆಗಿದ್ದನ್ನು ಎಲ್ಲರಿಗೂ ಗೊತ್ತು. ವ್ಯಾಪಾರವಿಲ್ಲದೆ ಪರದಾಡುತ್ತಿದ್ದ ಸ್ವಾವಲಂಬಿ ವೃದ್ಧ ದಂಪತಿಗಳ ಸಣ್ಣದೊಂದು ವಿಡಿಯೋ ದೊಡ್ಡ ಬದಲಾವಣೆಯನ್ನು ತಂದಿತ್ತು. ಇದೀಗ ಇಂತಹದೇ ಘಟನೆಯೊಂದು ಬೆಂಗಳೂರಿನಲ್ಲೂ ನಡೆದಿದೆ.
Meet Revana Siddappa, a senior citizen who sells saplings at Kanakapura road near Sarakki Signal , saplings price varies from Rs 10 to Rs 30. You can see him holding umbrella and selling saplings . If you pass this stretch, kindly buy from him ! ! pic.twitter.com/yHvYYhldFO
— Ashwini M Sripad (@AshwiniMS_TNIE) October 26, 2020
ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಮತ್ತೊಬ್ಬ ಹಿರಿಯ ವ್ಯಕ್ತಿಯ ಬದುಕಿಗೆ ನೆರವು ಸಿಕ್ಕಿದೆ. 79 ವರ್ಷ ವಯಸ್ಸಿನ ರೇವಣ್ಣ ಸಿದ್ದಪ್ಪ ಅವರ ನಿತ್ಯ ಬದುಕಿನಲ್ಲಿ ಬದಲಾವಣೆ ತಂದಿದೆ. ಕನಕಪುರ ರಸ್ತೆಯಲ್ಲಿ ಔಷಧಿ ಸಸಿಗಳನ್ನು ಮಾರಾಟ ಮಾಡುವ ಫೋಟೋ ಟ್ವಿಟರ್ ನಲ್ಲಿ ಹರಿದಾಡಿತ್ತು. ಒಂದು ವಾಣಿಜ್ಯ ಕಟ್ಟಡದ ಮುಂದೆ ಕೂರುವ ಸಿದ್ದಪ್ಪ ಅವರು, ಬಟ್ಟೆ ಹಾಸಿದ ನೆಲದಲ್ಲೆ ಗಿಡಗಳನ್ನು ಇಟ್ಟು ಮಾರುತ್ತಿದ್ದರು. ಅದು ಕೂಡ ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು. ಫೋಟೋ ವೈರಲ್ ಆಗುತ್ತಿದ್ದಂತೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತ ಪಡಿಸಿ ವೃದ್ಧ ವ್ಯಾಪಾರಿಗೆ ನೆರವಾಗಿದ್ದಾರೆ.
Hey Bangalore .. do show some love .. he sits in front of Wular Fashion factory, JP Nagar, Sarakki Signal, Kanakapura Road, Bangalore. https://t.co/rBFyQcbZAb
— Randeep Hooda (@RandeepHooda) October 26, 2020
ವ್ಯಾಪಾರವಿಲ್ಲದೆ ಕಷ್ಟ ಪಡುವ ಸಂದರ್ಭದಲ್ಲಿ ಒಂದಷ್ಟು ಜನ ಒಗ್ಗೂಡಿ ನೆರವಾಗಿದ್ದಾರೆ. ಸಿದ್ದಪ್ಪ ಅವರಿಗೆ ಮೇಜು, ಕುರ್ಚಿ ಹಾಗೂ ಛತ್ರಿ ಒದಗಿಸಿದ್ದಾರೆ. ಅವರ ಬದುಕಿಗೆ ನೆರವಾಗಲು ಇನ್ನಷ್ಟು ಪ್ರಯತ್ನ ನಡೆಸಿದ್ದಾರೆ.
@AshwiniMS_TNIE 🙂 Seee 🤍 https://t.co/0CA4MzuOvq pic.twitter.com/rrK38MYcII
— Samyukta Hornad (@samyuktahornad) October 26, 2020
ಇನ್ನು ಸಿದ್ದಪ್ಪ ಅವರ ಸುದ್ದಿ ಬಾಲಿವುಡ್ ನಟ ರಣದೀಪ್ ಹೂಡಾ ಗಮನ ಸೆಳೆದಿದ್ದು ಅವರು ಕೂಡ ಟ್ವೀಟ್ ಮೂಲಕ, ಗಿಡಗಳನ್ನು ಕೊಳ್ಳುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದ ಫಲಶ್ರುತಿಯಿಂದಾಗಿ ಇಪ್ಪತ್ತಕ್ಕೂ ಹೆಚ್ಚು ಜನರು ಸಿದ್ದಪ್ಪ ಅವರ ಬಳಿ ತೆರಳಿ ಗಿಡಗಳನ್ನು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಇತ್ತ ನಟಿ ಸಂಯುಕ್ತಾ ಸಂಯುಕ್ತ ಹೊರನಾಡು ಕೂಡ ಸಿದ್ದಪ್ಪ ಅವರ ಬಳಿ ತೆರಳಿ ಅವರಿಗೆ ಬೆಂಬಲ ಸೂಚಿಸಿ ಹಲವರಿಗೆ ಗಿಡ ಖರೀದಿಸುವಂತೆ ಕರೆ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
