fbpx
ಸಮಾಚಾರ

ಮತ್ತೆ ನಿಜವಾಯ್ತು ಅರ್ಚರ್ ಭವಿಷ್ಯ- ಆರ್ಚರ್ ಮಾಡಿದ್ದ ಏಳು ವರ್ಷದ ಹಿಂದಿನ ಹಳೆ ಟ್ವೀಟೊಂದು ವೈರಲ್

ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಗೇಲ್ 99 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು, ಜೋಫ್ರಾ ಅರ್ಚರ್ ಎಸೆದ ಯಾರ್ಕರ್ ರನ್ನು ಎದುರಿಸಲು ಗೇಲ್ ವಿಫಲರಾಗಿದ್ದರು. ಸದ್ಯ ಈ ಕುರಿತಂತೆ ಜೋಫ್ರಾ ಅರ್ಚರ್ ಮಾಡಿದ್ದ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

 

 

2013 ಫೆಬ್ರವರಿ 23ರಂದು ಜೋಫ್ರಾ ಆರ್ಚರ್ ಒಂದು ಟ್ವೀಟ್ ಮಾಡಿದ್ದರು. ‘ನನಗೆ ಗೊತ್ತಿದೆ, ನಾನೊಂದು ವೇಳೆ ಬೌಲಿಂಗ್ ಮಾಡಿದರೆ ಆತ 100 ಗಳಿಸಲಾರ’ ಎಂದು ಆ ಟ್ವೀಟ್‌ನಲ್ಲಿ ಆರ್ಚರ್ ಬರೆದುಕೊಂಡಿದ್ದರು. ಈ ಟ್ವೀಟ್‌ ಸತ್ಯವೆಂಬಂತೆ ಗೇಲ್ 99 ರನ್‌ಗೆ ಔಟ್ ಗೆ ಔಟ್ ಮಾಡಿದ್ದಾರೆ ಆರ್ಚರ್.

 

 

ಜೋಫ್ರಾ ಅರ್ಚರ್ ಈ ಹಿಂದೆ ಮಾಡಿದ್ದ ಟ್ವೀಟ್ ಸದ್ಯದ ಪಂದ್ಯಗಳಿಗೆ ಹೋಲಿಕೆ ಆಗುತ್ತಿರುವುದು ಗಮನರ್ಹವಾಗಿದೆ. ಸತತ ನಾಲ್ಕು ಸಿಕ್ಸರ್, ಒಂದೇ ಓವರಿನಲ್ಲಿ 30 ರನ್ ಸೇರಿದಂತೆ ಜೋಫ್ರಾ ಮಾಡಿದ ಹಲವು ಟ್ವೀಟ್‍ಗಳು ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top