fbpx
ಸಮಾಚಾರ

ಬಾಗಿಲು ಮುರಿದು ನಟಿ ಉಮಾಶ್ರೀ ಮನೆ ಕಳ್ಳತನ: ಅಪಾರ ಮೌಲ್ಯದ ವಸ್ತುಗಳು ಕಳವು

ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀ ಮನೆಗೆ ಖದೀಮರು ನುಗ್ಗಿ ತಮ್ಮ ಕೈಚಳಕ ತೋರಿಸಿದ್ದಾರೆ.

ಮನೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಅಪಾರ ಹಣ ಹಾಗೂ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಇದೀಗ ಉಮಾಶ್ರೀ ಬೆಂಗಳೂರಿನಿಂದ ರಬಕವಿಗೆ ತೆರಳುತ್ತಿದ್ದಾರೆ ಅಲ್ಲಿ ಮುಟ್ಟಿದ ನಂತರವೇ ಕಳ್ಳತನವಾಗಿರುವ ಹಣ, ವಸ್ತುಗಳ ನಿಖರ ಪ್ರಮಾಣ ಲಭ್ಯವಾಗಲಿದೆ.

ಖದೀಮರು, ಮನೆಯೊಳಗಿನ ಟ್ರಜರಿ ಒಡೆದು ಹಾಕಿ, ಒಡವೆ ಸಹಿತ ಹಣ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ತೇರದಾಳ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

“ಮನೆಯಲ್ಲಿ ಪೀಠೋಪಕರಣ, ದಿನ ಬಳಕೆಯ ವಸ್ತುಗಳು ಬಿಟ್ಟರೆ ಬೆಲೆ ಬಾಳುವ ವಸ್ತುಗಳು ಏನೂ ಇರಲಿಲ್ಲ. ಚಿನ್ನಾಭರಣ, ನಗದು ಕೂಡ ಇಟ್ಟಿರಲಿಲ್ಲ. ಕಳ್ಳತನವಾಗಿದೆ ಎಂದು ನಮ್ಮ ಹುಡುಗರು ಹೇಳಿದ್ದಾರೆ. ಆದರೆ, ಕಳ್ಳರು ಏನೇನು ಒಯ್ದಿದ್ದಾರೆ ಎಂದು ಗೊತ್ತಿಲ್ಲ. ಬೆಂಗಳೂರಿನಿಂದ ಹೊರಟಿದ್ದೇನೆ. ಸಂಜೆ ತಲುಪಲಿದ್ದೇನೆ” ಎಂದು ಉಮಾಶ್ರೀ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top