fbpx
ಸಮಾಚಾರ

ತನ್ನನ್ನು ಫೇಮಸ್ ಮಾಡಿದ ವ್ಯಕ್ತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ‘ಬಾಬಾ ಕಾ ಡಾಬಾ’ ಮಾಲೀಕ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಒಂದೇ ಒಂದು ವೀಡಿಯೋದಿಂದ ವೃದ್ಧ ದಂಪತಿಯ ಬದುಕು ಬದಲಾದ ಬೆನ್ನಲ್ಲೇ ಇದೀಗ ತನ್ನ ಕ್ಯಾಂಟೀನ್ ಅನ್ನು ಪ್ರಸಿದ್ದಿ ಮಾಡಿದ ಯೂಟ್ಯೂಬರ್ ವಿರುದ್ಧ ‘ಬಾಬಾ ಕಾ ಡಾಬಾ’ ಮಾಲೀಕ ಮಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಕಷ್ಟಕ್ಕೆ ಮರುಗಿದ ಜನ ನೀಡಿದ ಹಣದಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ ‘ಬಾಬಾ ಕಾ ಡಾಬಾ’ ಮಾಲೀಕ ಕಾಂತಾ ಪ್ರಸಾದ್ ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಬಾ ಕಾ ಡಾಬಾ ವಿಡಿಯೋ ಮಾಡಿದ್ದ ಗೌರವ್ ವಾಸನ್ ಜನರಿಂದ ಹಣ ಪಡೆಯುತ್ತಿದ್ದಾರೆ, ವೃದ್ಧನಿಗಾಗಿ ದಾನದ ರೂಪದಲ್ಲಿ ಬಂದ ಹಣ ಅವರಿಗೆ ತಲುಪಿಲ್ಲ” ಎಂದು ಆರೋಪಿಸಿದ್ದಾರೆ..

ಆರೋಪದ ಬೆನ್ನಲ್ಲೇ ವೃದ್ಧ ದೂರು ದಾಖಲಿಸಿದ್ದಾರೆ. ಜನರು ವರ್ಗಾಯಿಸಿರುವ ಹಣ ಗೌರವ್ ವಾಸನ್ ಮತ್ತು ಆತನ ಪತ್ನಿಯ ಖಾತೆಗೆ ಜಮೆ ಆಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.

ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾ ವೀಡಿಯೋ ಸಖತ್ ವೈರಲ್ ಆಗಿತ್ತು. ಕೊರೊನಾದಿಂದಾಗಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ವೃದ್ಧ ದಂಪತಿಯ ಕಷ್ಟವನ್ನ ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಗೌರವ್ ತಮ್ಮ ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ವೃದ್ಧ ದಂಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದದ್ದರು.

ನಂತರ ಈ ವಿಡಿಯೋ ವೈರಲ್ ಆಗಿದ್ದು, ನಟರು ಸೇರಿದಂತೆ ಬಹಳಷ್ಟು ಜನರು ವಿಡಿಯೋ ಶೇರ್ ಮಾಡಿದ್ದರು. ಬಾಬಾ ಕಾ ಡಾಬಾ ಬಳಿ ಭಾರಿ ಜನರು ಸೇರಿ ಆಹಾರ ಖರೀದಿಸಿದ್ದರು. ಬಹಳಷ್ಟು ಜನರು ದಂಪತಿಯ ಹಣಕಾಸಿನ ನೆರವನ್ನೂ ನೀಡಿದ್ದಾರೆ. ಆದರೆ ಇದೀಗ ದಂಪತಿ ಠಾಣೆ ಮೆಟ್ಟಿರೇರಿದ್ದು, ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top