ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಚೆನ್ನೈ ಫ್ರಾಂಚೈಸಿಯೊಂದಿಗೆ ತನ್ನ ಭವಿಷ್ಯದ ಕುರಿತು ಇದ್ದ ಸಂಶಯವನ್ನು ನಿವಾರಿಸಿದ್ದಾರೆ. ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಏನು ಕೇಳಲು ಬಯಸಿದ್ದರೋ ಅದನ್ನೇ ಅವರು ಹೇಳಿದ್ದಾರೆ.
ಯೆಲ್ಲೋ ಜೆರ್ಸಿಯಲ್ಲಿ ಇದೇ ಕೊನೆಯ ಪಂದ್ಯವೇ ಎಂದು ಕೇಳಿದ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯವರು ಎರಡನೇ ಪದಗಳಲ್ಲಿ ಉತ್ತರ ನೀಡಿದ್ದಾರೆ.
Danny Morrison : Could this be your last game in yellow ? #MSDhoni : Definitely Not!#CSK have won the toss and they will bowl first against #KXIP in Match 53 of #Dream11IPL pic.twitter.com/KhaDJFcApe
— IndianPremierLeague (@IPL) November 1, 2020
ಪಂದ್ಯದ ಟಾಸ್ ವೇಳೆ ಧೋನಿಯವರನ್ನು ಮಾತನಾಡಿಸಿದ ಕಮೆಂಟೆಟರ್ ಮತ್ತು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡ್ಯಾನಿ ಮಾರಿಸನ್, ಯೆಲ್ಲೋ ಜೆರ್ಸಿಯಲ್ಲಿ ಈ ಪಂದ್ಯವೇ ಕೊನೆ ಪಂದ್ಯ ಆಗಲಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎರಡನೇ ಪದಗಳಲ್ಲಿ ಉತ್ತರಿಸಿರುವ ಧೋನಿ ಖಂಡಿತವಾಗಿಯೂ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ಐಪಿಎಲ್ ಅನ್ನು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಸುಳಿವು ನೀಡಿದ್ದಾರೆ.
ಈ ಮಧ್ಯೆ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ತಂಡದಲ್ಲಿ ಹೆಚ್ಚಿನ ಬದಲಾವಣೆ ಏನೂ ಮಾಡುವುದಿಲ್ಲ. ನಾಯಕನ ಬದಲಾವಣೆಯ ಮಾತೇ ಇಲ್ಲ ಎಂಬ ಸುಳಿವು ನೀಡಿದ್ದರು. ಇದೀಗ ಖುದ್ದಾಗಿ ಧೋನಿ ಈ ಮಾತನ್ನು ದೃಢ ಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
