ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕನ್ನಡವೂ ಸೇರಿದಂತೆ ತೆಲುಗು, ತೆಮಿಳು ಚಿತ್ರರಂಗಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇಂಥಾ ರಶ್ಮಿಕಾ ಮಂದಣ್ಣ ಅತೀ ಹೆಚ್ಚು ಬಾರಿ ಟ್ರೋಲ್ ಆಗಿದ್ದಾರೆ. ನಾನಾ ಕಾರಣಗಳಿಗೆ ರಶ್ಮಿಕಾ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ. ಈ ಬಗ್ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ ಪೋಸ್ಟ್:
ಸ್ಕ್ರೀನ್ನ ಸ್ಪರ್ಷಿಸಿ ಕೂಡ ನಮಗೆ ಏನು ಬೇಕಾದರೂ ಎಲ್ಲವೂ ಸಿಗಬಹುದಾದ ವಯಸ್ಸಿನಲ್ಲಿ, ಸಮಯದಲ್ಲಿದ್ದೇವೆ. ಇದು ಮನುಷ್ಯನನ್ನು ಉಳಿಸಬಲ್ಲದು, ಸಾಯಿಸಬಲ್ಲದು.
ನಾನು ಬಾಡಿ ಶೇಮಿಂಗ್ಗೆ ಒಳಪಟ್ಟಿದ್ದೇನಾ?-ಹೌದು
ನನ್ನ ಕ್ಯಾರೆಕ್ಟರ್ ಬಗ್ಗೆ ಅನುಚಿತವಾಗಿ ಮಾತನಾಡಲಾಗಿದೆಯಾ?-ಹೌದಯ
ನನಗೆ ಬೆದರಿಕೆ ಕರೆಗಳು ಬಂದಿವೆಯಾ?-ಹೌದು
ಇಷ್ಟೆಲ್ಲಾ ಮಾಡಿದರೂ ನಾನು ನನಗೆ ಸಂತೋಷ ಕೊಡುವಂತ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿಲ್ಲ. ಯಾಕಂದರೆ ನಮ್ಮ ಸುತ್ತಲಿರುವ ನೆಗೆಟಿವಿಟಿಗಿಂತ ಮೀರಿದ್ದು ಪಾಸಿಟಿವಿಟಿ ಇದೆ. ಎಷ್ಟು ನೆಗೆಟಿವ್ ಇದೆ ಅಂದ್ರೆ ಎಲ್ಲರೂ ಅದೇ ಸತ್ಯ ಎಂದುಕೊಳ್ಳುತ್ತಾರೆ. ಆದರೆ ಅವೆಲ್ಲವೂ ಕ್ಷಣಿಕ. ಈ ಕ್ಷಣದಿಂದ ಇನ್ನು ಮುಂದೆಯಾದರೂ ನಾನು ನಮ್ಮ Digital well being ಬಗ್ಗೆ ಗಮನ ಹರಿಸಬೇಕು. ನಮ್ಮ ಫೋನುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಜನರ ಜೊತೆ ಸಂಪರ್ಕ ಹೊಂದಲು, ಅದ್ಭುತ ವಿಚಾರಗಳ ಬಗ್ಗೆ ಚರ್ಚಿಸಲು ಹಾಗೂ ಒಬ್ಬ ವ್ಯಕ್ತಿಯ ಬ್ಯುಸಿನೆಸ್ ಒಳ್ಳೆದಾಗುವುದಕ್ಕೆ ಬಳಸಬೇಕು. ಹೀಗೆ ಮಾಡಿ ನೀವೂ ಅನೇಕರಿಗೆ ಸ್ಫೂರ್ತಿಯಾಗಿ,’ ಎಂದು ರಶ್ಮಿಕಾ ಬರೆದಿದ್ದಾರೆ.
ಉಳಿದಂತೆ ರಶ್ಮಿಕಾ ಮಂದಣ್ಣ ಅವರ ಅಭಿನಯದ ಕಾರ್ತಿ ಜೊತೆಗೆ ‘ಸುಲ್ತಾನ್’, ಅಲ್ಲು ಅರ್ಜುನ್ ಜೊತೆಗೆ ‘ಪುಷ್ಫ’, ಧ್ರುವ ಸರ್ಜಾ ಜೊತೆಗಿನ ‘ಪೊಗರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಶರ್ವಾನಂದ ಅವರ ಜೊತೆಗೆ ರಶ್ಮಿಕಾ ಸಿನಿಮಾ ಸೆಟ್ಟೇರಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
