fbpx
ಸಮಾಚಾರ

RR ನಗರ ಬೈಎಲೆಕ್ಷನ್ :ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೇ ಮತದಾನದ ಅವಕಾಶ ಇಲ್ಲ

ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು (ನ. 3) ಉಪಚುನಾವಣೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7ಗಂಟೆಗೆ ಪ್ರಾರಂಭಗೊಂಡಿದೆ.

ಆರ್​ಆರ್​ ನಗರ ಬಿಜೆಪಿ ಅಭ್ಯರ್ಥಿಯಾಗಿರುವ ಚುನಾವಣೆಯಲ್ಲಿ ಗೆಲ್ಲಲು ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. ಆದರೆ ಸ್ವತಃ ಮುನಿರತ್ನ ಅವರಿಗೆಯೇ ಈ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಇಲ್ಲ.. ಯಾಕೆ ಅಂತೀರಾ? ಮುಂದೆ ಓದಿ

ಮುನಿರತ್ನ ಅವರು RR ನಗರ ಬೈ ಎಲೆಕ್ಷನ್ ನಲ್ಲಿ ಅಭ್ಯರ್ಥಿಯಾದರೂ ಆರ್ ಆರ್ ನಗರ ಕ್ಷೇತ್ರದ ಮತದಾರರಲ್ಲ. ಮುನಿರತ್ನರ ನಿವಾಸ ಇರುವುದು ಬೆಂಗಳೂರಿನ ವೈಯಾಲಿಕಾವಲ್​ನಲ್ಲಿ. ವೈಯಾಲಿಕಾವಲ್​, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಮುನಿರತ್ನಗೆ ಈ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಇಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top