ಹಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್ ನಟ ಫರಾಜ್ ಖಾನ್ ಬುಧವಾರ ನಿಧನರಾಗಿದ್ದಾರೆ. 60 ವರ್ಷದ ಈ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ‘ಮೆಹಂದಿ’ ‘ಫರೇಬ್’ ಮುಂತಾದ ಸಿನಿಮಾಗಳಿಂದ ಇವರು ಖ್ಯಾತಿ ಪಡೆದಿದ್ದರು.
With a heavy heart I break the news that #FaraazKhan has left us for what I believe, is a better place.Gratitude to all for your help & good wishes when he needed it most.Please keep his family in your thoughts & prayers.The void he has left behind will be impossible to fill 🙏
— Pooja Bhatt (@PoojaB1972) November 4, 2020
ಶ್ವಾಸಕೋಶದ ಇನ್ಫೆಕ್ಷನ್ನಿಂದ ಬಳಲುತ್ತಿರುವ ಫರಾಜ್ ಖಾನ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಕೆಮ್ಮಿನಿಂದ ಬಳಲುತ್ತಿರುವ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಕುಟುಂಬದವರ ಬಳಿ ಇದ್ದ ಹಣವೆಲ್ಲ ಖಾಲಿ ಆಗಿ, ಚಿಕಿತ್ಸೆಗಾಗಿ ಇನ್ನೂ 25 ಲಕ್ಷ ರೂ. ಬೇಕಾಗಿದೆ ಎಂದು ಫರಾಜ್ ಕುಟುಂಬದವರು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸಲ್ಮಾನ್ ಖಾನ್, ಫೂಜಾ ಭಟ್ ಮುಂತಾದ ಸೆಲೆಬ್ರಿಟಿಗಳು ಸ್ಪಂದಿಸಿದ್ದರು. ಕಡೆಗೂ ಫರಾಜ್ ಬದುಕುಳಿಯಲಿಲ್ಲ
ಇವರ ಸಾವಿನ ಸುದ್ದಿಯನ್ನು ಖಚಿತಪಡಿಸಿರುವ ನಟಿ, ನಿರ್ಮಾಪಕಿ ಪೂಜಾ ಭಟ್ ‘ನಾನು ಅತ್ಯಂತ ದುಃಖಿತಳಾಗಿದ್ದೇನೆ. ಇಂದು ಫರಾಝ್ ಖಾನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಅವರ ಕುಟುಂಬಕ್ಕೆ ನಿಮ್ಮ ಹಾರೈಕೆ ಇರಲಿ. ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
