fbpx
ಸಮಾಚಾರ

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮದುವೆ ಡೇಟ್ ಫಿಕ್ಸ್: ವಿಶೇ‍ಷ ದಿನದಂದು ವಿವಾಹ

ನಟಿ ಮಿಲನ ನಾಗರಾಜ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ ಹಸೆಮಣೆ ಏರುವ ದಿನಾಂಕ ನಿಗದಿಯಾಗಿದೆ. ಸಿನಿಮಾದಲ್ಲಿ ಜೋಡಿಯಾಗಿ, ಮುಂದೆ ನಿಜ ಜೀವನದಲ್ಲೂ ಜೀವನ ಸಂಗಾತಿಗಳಾಗುತ್ತಿರುವ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌ ಅವರ ಮದುವೆ ಮುಂದಿನ ವರ್ಷ ಫೆಬ್ರವರಿ 14ರಂದು ನಡೆಯಲಿದೆ.

 

 

ಫೆಬ್ರವರಿ 14 ಅಂತ ಬರೆದಿರುವ ಹಾರ್ಟ್​ ಶೇಪ್ಡ್​ ಟೆಂಪ್ಲೇಟ್ಸ್​​ ಜೊತೆ ಫೋಟೋ ಪೋಸ್ಟ್​ ಮಾಡಿದ್ದಾರೆ. ಇನ್ನು, ಈ ತಾರಾ ಜೋಡಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರಿಗೆ ‘ಲವ್‌ ಮಾಕ್ಟೇಲ್’ ಸಿನಿಮಾ ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು. ಇನ್ನು ಈ ಚಿತ್ರ ರಿಲೀಸ್ ಆದನಂತರದಲ್ಲಿ ಇವರಿಬ್ಬರು ಪ್ರೀತಿ ಮಾಡುತ್ತಿರುವ ವಿಚಾರ ಬಹಿರಂಗವಾಯಿತು. ಕಳೆದ 6 ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆಗೆ ಸ್ವತಃ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತೆರೆ ಎಳೆದಿದ್ದಾರೆ.

ಮಿಲನ ಅವರು ೨೦೧೩ರಲ್ಲಿ `ನಮ್ ದುನಿಯಾ ನಮ್ಮ ಸ್ಟೈಲ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ದರ್ಶನ ಅಭಿನಯದ ಬೃಂದಾವನ ಚಿತ್ರದಲ್ಲಿಯೂ ನಟಿಸಿದ್ದರು. ಒಂದು ಮಲೆಯಾಲಂ ಚಿತ್ರದಲ್ಲೂ ನಟಿಸಿದ್ದಾರೆ. ಮೂಲತಃ ಹಾಸನದವರು.

ಡಾರ್ಲಿಂಗ್ ಕೃಷ್ಣ ಅವರ ಮೂಲ ಹೆಸರು ಸುನೀಲ್ ನಾಗಪ್ಪ. `ಜಾಕಿ’, `ಹುಡುಗರು’ ಚಿತ್ರದಲ್ಲಿ ದುನಿಯಾ ಸೂರಿ ಜತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಸುನೀಲ್ ಅವರದ್ದು. ‘ಮದರಂಗಿ’ ಅವರು ನಾಯಕನಟನಾಗಿ ನಟಿಸಿದ ಮೊದಲ ಚಿತ್ರ. ನಂತರ `ಚಾರ್ಲಿ’,`ಜಾಲಿ ಬಾರು ಮತ್ತು ಪೋಲಿ ಹುಡುಗರು’,`ಮುಂಬೈ’ ಚಿತ್ರಗಳಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top