fbpx
ಸಮಾಚಾರ

‘ಬಿಗ್ ಬಾಸ್-7’ ಮುಗಿದು ವರ್ಷದ ಬಳಿಕ ಶೈನ್ ಶೆಟ್ಟಿಗೆ ಸಿಕ್ತು ಬಹುಮಾನ

ಬಿಗ್ ಬಾಸ್ ಕನ್ನಡ ಸೀಸನ್ 7ರ ವಿಜೇತ್ ಶೈನ್ ಶೆಟ್ಟಿ ಅವರಿಗೆ ಈ ಶೋ ಗೆದ್ದಾದ ನಂತರ ಹಣದ ರೂಪದಲ್ಲಿ ಬಹುಮಾನ ಸೇರಿತ್ತು. ಇದರ ಜೊತೆಗೆ ಕಾರ್ ಕೂಡ ನೀಡಲಾಗುವುದು ಎಂದು ಹೇಳಲಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 7 ಆರಂಭವಾಗಿ ಒಂದು ವರ್ಷವಾಗುತ್ತ ಬಂತು. ಈಗ ಅವರ ಮನೆಗೆ ಆ ಕಾರ್ ಬಂದಿದೆ.

ಬಿಗ್ ಬಾಸ್-7 ಮುಗಿದು ಒಂದು ವರ್ಷ ಮುಗಿಯುತ್ತ ಬಂದಿದೆ. ಆದ್ರೆ ಈಗ ಶೋ ನಲ್ಲಿ ಗಿಫ್ಟ್ ಆಗಿ ಬಂದ ಕಾರು ಶೈನ್ ಶೆಟ್ಟಿ ಮನೆಸೇರಿದೆ. ಟಾಟಾ ಆಲ್ಟ್ರೋಜ್ (TaTa Altroz) ಕಾರನ್ನು ಶೈನ್ ಗಿಫ್ಟ್ ಆಗಿ ಪಡೆದಿದ್ದಾರೆ. ಗಿಫ್ಟ್ ಆಗಿ ಬಂದ ಕಾರುನ್ನು ತಾಯಿಯ ಜೊತೆ ಹೋಗಿ ಪಡೆಯುತ್ತಿರುವ ಸಂತಸದ ವಿಡಿಯೋವನ್ನ ಶೈನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

 

 

View this post on Instagram

 

Received the Tata Altroz car from Key Motors Kanakpura Road branch post lock down. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ Key Motors, Kanakapura Road ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ @tatamotorscars ಹಾಗು @colorskannadaofficial ಅವರಿಗೂ ನನ್ನ ಧನ್ಯವಾದಗಳು. #biggbosskannada #colorskannada #tataaltroz #shineshetty #alwaysshine #shineshettyfans

A post shared by SHINE SHETTY (@shineshettyofficial) on

 

ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ, ಟಾಟಾ ಆಲ್ಟ್ರೋಜ್ ಬಿಗ್‍ಬಾಸ್ ಸೀಸನ್-7 ಕಾರ್. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸ ಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್ ಕನಕಪುರ ರೋಡ್ ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ ಟಾಟಾ ಮೋಟರ್ಸ್ ಅವರಿಗೂ ಧನ್ಯವಾದ ಎಂದು ಶೈನ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top