fbpx
ಸಮಾಚಾರ

ಚುನಾವಣೆ ಸೋತ ಟ್ರಂಪ್ ಗೆ ಮತ್ತೊಂದು ಅಘಾತ: ಪತ್ನಿಯಿಂದ ವಿಚ್ಛೇದನ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅವರ ಪತ್ನಿ ಮೆಲಾನಿಯಾ ಟ್ರಂಪ್‌ (50) ವಿಚ್ಛೇದನ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧ್ಯಕ್ಷೀಯ ಅವಧಿ ಪೂರ್ಣಗೊಂಡು ಟ್ರಂಪ್‌ ಶ್ವೇತಭವನದಿಂದ ಹೊರಬರುತ್ತಿದ್ದಂತೆ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ಇಬ್ಬರು ಮಾಜಿ ಅಧಿಕಾರಿಗಳು ಹೇಳಿದ್ದಾರೆ.

”15 ವರ್ಷ ಟ್ರಂಪ್‌ ಜತೆ ಬದುಕು ಸವೆಸಿದ್ದು ಸಾಕಾಗಿದೆ ಎಂಬುದಾಗಿ ಖಾಸಗಿ ಮಾತುಕತೆಯಲ್ಲಿ ಮೆಲಾನಿಯಾ ಹೇಳಿಕೊಂಡಿದ್ದಾರೆ. ಒಂದೂವರೆ ವರ್ಷ ಹಿಂದೆಯೇ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಆರು ತಿಂಗಳ ಹಿಂದೆಯೇ ಟ್ರಂಪ್‌ಗೆ ಗುಡ್‌ ಬೈ ಹೇಳಿ ನಿರ್ಗಮಿಸಲು ಮೆಲಾನಿಯಾ ಮುಂದಾಗಿದ್ದರು.

ಆದರೆ, ಅಧ್ಯಕ್ಷಗಿರಿಯಲ್ಲಿದ್ದ ಅವರು ಅವಮಾನ ಸಹಿಸದೇ ಪ್ರಯೋಗಿಸಬಹುದಾದ ದಂಡನಾ ಕ್ರಮಕ್ಕೆ ಬೆದರಿ ಇದುವರೆಗೆ ಸುಮ್ಮನಿದ್ದರು. ಈ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೇ ತೆರೆಮರೆಗೆ ಸರಿದಿದ್ದರು,” ಎಂದು ಇಂಗ್ಲೆಂಡಿನ ‘ಡೈಲಿ ಮೇಲ್‌’ ವರದಿ ಮಾಡಿದೆ.

2016 ರಲ್ಲಿ ಟ್ರಂಪ್ ಚುನಾವಣೆಯಲ್ಲಿ ಗೆದ್ದಾಗ ಮೆಲಾನಿಯಾ ಟ್ರಂಪ್ ಕಣ್ಣೀರಾಗಿದ್ದರು, ಗೆಲುವನ್ನು ಆಕೆ ನಿರೀಕ್ಷಿಸಿರಲಿಲ್ಲ. ಟ್ರಂಪ್-ಮೆಲಾನಿಯಾ ಟ್ರಂಪ್ ಮಗನ ಶಾಲೆ ಇದ್ದ ಕಾರಣದಿಂದಾಗಿ ಅವರು ನ್ಯೂಯಾರ್ಕ್ ನಿಂದ ವಾಷಿಂಗ್ ಟನ್ ಗೆ ಸ್ಥಳಾಂತರಗೊಳ್ಳುವುದಕ್ಕೆ 5 ತಿಂಗಳು ಕಾದಿದ್ದರು ಎಂದೂ ಶ್ವೇತ ಭವನದ ನಿಕಟವರ್ತಿ ಒಮರೋಸಾ ಮನಿಗಾಲ್ಟ್ ನ್ಯೂಮನ್ ತಿಳಿಸಿದ್ದಾರೆ.

ವಿವಾಹದ ನಂತರ ಡೊನಾಲ್ಡ್ ಟ್ರಂಪ್ ಜೊತೆ ಮೆಲಾನಿಯಾ ಒಪ್ಪಂದ ಮಾಡಿಕೊಂಡಿದ್ದು, ಮಗನಿಗೆ ಆತನ ಪಾಲನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಅಷ್ಟೇ ಅಲ್ಲದೇ ಶ್ವೇತ ಭವನದಲ್ಲಿಯೂ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಪ್ರತ್ಯೇಕ ಕೋಠಡಿಗಳಲ್ಲೇ ಇರುತ್ತಿದ್ದರು ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top