fbpx
ಸಮಾಚಾರ

ದೀಪಾವಳಿಗೆ ಊರಿಗೆ ಹೋಗ್ಬೇಕು ಅಂತಾ ಪ್ಲಾನ್ ಮಾಡ್ಕೊಂಡಿರುವವರಿಗೆ KSRTCಯಿಂದ ಗುಡ್ ನ್ಯೂಸ್

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್ ಕೊಟ್ಟಿದೆ. ಹಾಗಂತ ಬಸ್ ಟಿಕೆಟ್ ಏನಾದ್ರೂ ಕಮ್ಮಿ ಮಾಡಿದ್ದಾರಾ? ಎಂದು ಭಾವಿಸಿಕೊಂಡರೆ ಅದು ನಿಮ್ಮ ತಪ್ಪು ಭಾವನೆಯಾಗುತ್ತೆ. ಯಾಕಂದ್ರೆ ಟಿಕೆಟ್ ಬೆಲೆನೇ ಏನೂ ಕಮ್ಮಿ ಮಾಡಿಲ್ಲ, ಆದರೆ ಅನುಕೂಲವಾಗುಂತೆ ಬರೋಬ್ಬರಿ 1,000 ಬಸ್‍ಗಳ ಹೆಚ್ಚುವರಿ ಸೇವೆ ನೀಡಲು ಮುಂದಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 13,14 ಮತ್ತು 15ರಂದು ಬೆಂಗಳೂರಿನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ವಿವಿಧ ಪ್ರದೇಶಗಳಿಗೆ ಇರಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಮೆಜೆಸ್ಟಿಕ್’ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ ಮುಂತಾದ ಸ್ಥಳಗಳಿಗೆ ತೆರಳಲಿವೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ವ್ಯವಸ್ಥೆಯಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. www.ksrtc.in ವೆಬ್ ಸೈಟ್ ಮೂಲಕ ಟಿಕೆಟ್ ಗಳನ್ನು ಬುಕಿಂಗ್ ಮಾಡಬಹುದು.

ಬೇಡಿಕೆಗೆ ಅನುಗುಣವಾಗಿ ನಗರ ಪ್ರಮುಖ ಸ್ಥಳಗಳಾದ ವಿಜಯನಗರ, ಬನಶಂಕರಿ, ಜಾಲಹಳ್ಳಿ ಕ್ರಾಸ್, ಬಸವೇಶ್ವರ ನಿಲ್ದಾಣ, ಜಯನಗರ 4ನೇ ಬ್ಲಾಕ್, ಕೆಂಗೇರಿ ಉಪನಗರ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿಷ್ಠಿತ ಬಸ್‌ಗಳನ್ನು ಶಾಂತಿನಗರದಲ್ಲಿನ ಡಿಪೊ 2 ಮತ್ತು 3ರ ಮುಂಭಾಗದಿಂದ ಬಿಡಲಾಗುತ್ತದೆ. ಹಾಗೆಯೇ ನವೆಂಬರ್ 16ರಂದು ರಾಜ್ಯ ಮತ್ತು ಹೊರರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top