fbpx
ಸಮಾಚಾರ

ಮರಾಠ ಹಾಗು ಲಿಂಗಾಯತ ಪ್ರಾಧಿಕಾರದ ನಂತರ ಜೈನ ಪ್ರಾಧಿಕಾರಕ್ಕೆ ಮುಂದಾಗ್ತಾರಾ ಸಿಎಂ ಯೆಡಿಯೂರಪ್ಪ

ಕರ್ನಾಟಕದಲ್ಲಿ ಸದ್ಯಕ್ಕೆ ಬಗೆಬಗೆಯ ಪ್ರಾಧಿಕಾರಗಳು ರಚನೆಯಾಗುತ್ತಿವೇ, ಇದೀಗ ಕರ್ನಾಟಕ ಜೈನ್ ಅಸೋಸಿಯೇಷನ್ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದೆ. ಮಾರಾಠ, ಲಿಂಗಾಯತ ನಿಗಮದಂತೆ ಜೈನ ನಿಗಮ ಮಾಡಿ ಅನುದಾನ ನೀಡಿ ಎಂದು ಮನವಿ ಮಾಡಿಕೊಂಡಿದೆ.

 

 

ಧರ್ಮಾಧಾರಿತ, ಜಾತಿಯಾಧಾರಿತ ವಿಚಾರಗಳನ್ನು ಅನುಸರಿಸಿ ಸರಕಾರಗಳು ಅಭಿವೃದ್ಧಿಯ ನೆಪದಲ್ಲಿ‌ ನಿಗಮ ಮಂಡಳಿಗಳನ್ನು ರಚಿಸುತ್ತಿದೆ. ಸರಕಾರವು ಎಲ್ಲಾ ಮತ ಧರ್ಮಗಳ ಅಭಿವೃದ್ಧಿ ನಿಗಮಗಳನ್ನು ಮಾಡುವುದಾದರೆ ಜೈನರಿಗೂ ಈ ವ್ಯವಸ್ಥೆಯನ್ನು ಮಾಡಲಿ ಎಂದು ಜೈನ ಧರ್ಮೀಯರು ಆಗ್ರಹಿಸುತ್ತಿದ್ದಾರೆ.

“ಅನೇಕ ಜೈನರು ಕಡು ಬಡತನದಲ್ಲಿ ಇದ್ದಾರೆ. ನಿರುದ್ಯೋಗ ಸಮಸ್ಯೆ, ಸಾಮಾಜಿಕ ಅಭದ್ರತೆ ಕಾಡುತ್ತಿದೆ. ರಾಜಕೀಯವಾಗಿಯೂ ಜೈನರು ದುರ್ಬಲರಾಗಿದ್ದಾರೆ. ಜೈನರು ಮೊದಲೇ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಹಾಗಾಗಿ ಜೈನರು ಸಾಮಾಜಿಕವಾಗಿ ಮುಂದುವರೆಯಬೇಕಾಗಿದೆ. ಒಂದು ಕಾಲದಲ್ಲಿ ಜೈನರು ಈ ನಾಡಿನ ಸಂಸ್ಕೃತಿ ಧರ್ಮ ಪರಂಪರೆಗೆ ಅಗಾಧ ಕಾಣಿಕೆ ನೀಡಿದವರಾಗಿದ್ದಾರೆ. ಹಾಗಾಗಿ ಸರಕಾರದಿಂದ ಸವಲತ್ತು ಸಿಗಬೇಕಾಗಿದೆ. ಆದುದರಿಂದ ಜೈನರಿಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರದ ಅಗತ್ಯತೆ ಇದೆ. ಇದು ಜೈನ ಸಮಾಜದ ಒಕ್ಕೊರಲ ಅಭಿಪ್ರಾಯವಾಗಿದೆ.” ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top