fbpx
ಸಮಾಚಾರ

ಐಪಿಎಲ್ ಮುಗಿಯುತ್ತಿದ್ದಂತೆ ನಿಶ್ಚಿತಾರ್ಥ ಮಾಡಿಕೊಂಡ KXIP ತಂಡದ ಸ್ಟಾರ್ ಆಟಗಾರ

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಟಗಾರ ನಿಕೋಲಸ್ ಪೋರನ್ ತಮ್ಮ ಗೆಳತೊಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರೇಯಸಿ ಅಲಿಸ್ಸಾ ಮೈಗಲ್‌ಗೆ ಉಂಗುರ ತೊಡಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಸಂತಸದ ಸಂಗತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 

 

“ಆ ದೇವರು ನಮ್ಮಿಬ್ಬರ ಮೇಲೆ ವಿಶೇಷ ಆಶೀರ್ವಾದ ಕರುಣಿಸಿದ್ದಾನೆ. ನಾನು ಮತ್ತು ಕತ್ರೀನಾ ಮಿಗ್ಯೂಲ್‌ (ಅಲಿಸಾ ಮಿಗ್ಯೂಲ್) ಎಂಗೇಜ್ಮೆಂಟ್‌ ಮಾಡಿಕೊಂಡ ಸಂಗತಿ ತಿಳಿಸಲು ಸಂತಸವಾಗುತ್ತಿದೆ. ಲವ್‌ ಯೂ ಮಿಗ್ಸ್‌,” ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಗೋಡೆಯ ಮೇಲೆ ಪೂರನ್‌ ಬರೆದುಕೊಂಡಿದ್ದಾರೆ.

 

 

ನಿಕೋಲಸ್‌ ಪೂರನ್‌ ಅವರ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಫ್ರಾಂಚೈಸಿ ತಂಡ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಆಟಗಾರು ತಂಡದ ಸ್ಟಾರ್‌ ಆಟಗಾರನಿಗೆ ಶುಭ ಹಾರೈಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ , ಜೇಸನ್ ಹೋಲ್ಡರ್, ಕಿರಾನ್ ಪೊಲಾರ್ಡ್ ಸೇರಿದಂತೆ ಹಾಲಿ ಮಾಜಿ ಆಟಗಾರರು ಶುಭ ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top