fbpx
ಸಮಾಚಾರ

RCB ಅಭಿಮಾನಿಗಳ ಹೃದಯ ಕದ್ದ ಗೇಲ್ ತಂದೆ: ಅಭಿಮಾನಿಗಳು ಫುಲ್ ಖುಷ್

ಸದ್ಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಆಡುತ್ತಿರುವ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ತಂದೆ ಹುಟ್ಟುಹಬ್ಬ ಆಚರಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ RCB ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದೆ.

 

 

ಕಳೆದ ಮೂರು ದಿನದ ಹಿಂದೆ ಗೇಲ್ ಅವರ ತಂದೆ ಡಡ್ಲಿ ಗೇಲ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಫೋಟೋಗಳನ್ನು ಕ್ರಿಸ್ ಗೇಲ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಗೇಲ್ ತಂದೆ ಆರ್‌ಸಿಬಿ ತಂಡದ ಹ್ಯಾಟ್ ಧರಿಸಿದ್ದಾರೆ. ಇದು ಬೆಂಗಳೂರು ನೆಟ್ಟಿಗರ ಹೃದಯ ಕದ್ದಿದ್ದು, ಪಂಜಾಬ್ ತಂಡದಲ್ಲಿ ಆಡುತ್ತಿದ್ದರೂ ಕ್ರಿಸ್ ಗೇಲ್ ಅವರು ಬೆಂಗಳೂರು ತಂಡದ ಮೇಲಿನ ಪ್ರೀತಿಯನ್ನು ಮರೆತ್ತಿಲ್ಲ ಎಂದು ಫ್ಯಾನ್ಸ್ ಕಮೆಂಟ್ ಹಾಕುತ್ತಿದ್ದಾರೆ.

ತಮ್ಮ ತಂದೆಯ ಹುಟ್ಟುಹಬ್ಬದ ವಿಚಾರವಾಗಿ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಗೇಲ್, ನಿಜವಾದ ಗೇಲ್, ಹುಟ್ಟು ಹಬ್ಬದ ಶುಭಾಶಯಗಳು ಅಪ್ಪ. ಕೊನೆಯಿಲ್ಲದ ಪ್ರೀತಿ ನಿಮಗೆ. ಮನೆಯಲ್ಲಿರುವ ನೈಟ್ ಕ್ಲಬ್ ನಿಮಗಾಗಿ ತೆರದಿದೆ. ಆದರೆ ನೃತ್ಯಗಾರ್ತಿಯರು ನಿಮ್ಮ ಆಯ್ಕೆಗೆ ಬಿಟ್ಟಿದೆ. ಲೀವಿಂಗ್ ದಿ ಲೈಫ್ ಅಪ್ಪ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನಲ್ಲಿ ಗೇಲ್ ತಂದೆ ಆರ್‌ಸಿಬಿ ಹ್ಯಾಟ್ ತೊಟ್ಟು ಮಿಂಚಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top