fbpx
ಸಮಾಚಾರ

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾವಿದನ ಬದುಕಲ್ಲಿ ವಿಧಿಯಾಟ: ಕಷ್ಟದಲ್ಲಿ ಕೈಹಿಡಿಯದ ಚಿತ್ರರಂಗ

ಕನ್ನಡ ಚಿತ್ರರಂಗದಲ್ಲಿ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಿರಿಯ ಕಲಾವಿದನಾಗಿ ನಟಿಸಿದ ಹಾಗೂ ಸಾವಿರಾರು ಧಾರಾವಾಹಿಗಳಲ್ಲಿ ದುಡಿರುವ ನಟ ಜಂಗ್ಲೀ ಪ್ರಸನ್ನ ಅವರ ಜೀವನ ಪರಿಸ್ಥಿತಿ ಹದಗೆಟ್ಟಿದ್ದು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

 

 

ಜೀವನೋಪಾಯಕ್ಕಾಗಿ ನಟನೆಯನ್ನೇ ಅವಲಂಭಿಸಿದ್ದ ಪ್ರಸನ್ನ ಅವರಿಗೆ ಕಾಲ ಕ್ರಮೇಣ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಸಿಗುವುದು ಕಡಿಮೆಯಾಗಿತ್ತು ಅಲ್ಲದೆ ಕೊರೋನಾ ಕಾರಣದಿಂದಾಗಿ ಅವಕಾಶಗಳೇ ನಿಂತುಹೋಗಿತ್ತು. ಕೆಲಸವೇ ಇಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಸಮಯದಲ್ಲೇ ಪ್ರಸನ್ನ ಆರೋಗ್ಯದಲ್ಲಿ ಕೂಡ ಏರುಪೇರಾಗಿ ಹಾಸಿಗೆ ಹಿಡಿದಿದ್ದು ಇದೀಗ ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ..

 

 

ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದ ಪ್ರಸನ್ನ ಅವರು ಒಂದು ತಿಂಗಳ ಹಿಂದೆಯಷ್ಟೇ ಚಸ್ತ್ರಚಿಕಿತ್ಸೆ ಮಾಡಿಕೊಂಡು ತಮ್ಮ ಒಂದು ಕಾಲನ್ನು ತೆಗಿಸಿಕೊಂಡಿದ್ದಾರೆ. ಕಾಲನ್ನು ತೆಗೆದಿರುವುದರಿಂದ ಕೃತಕ ಕಾಲಿನ ಜೋಡಣೆಗೆ ಹಣದ ಅವಶ್ಯಕತೆಯಿದ್ದು ಮುಂದಿನ ಚಿಕಿತ್ಸೆಗಾಗಿ ಹಣವಿಲ್ಲದೆ ಮನೆಯಲ್ಲಿಯೇ ಹಾಸಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾಲು ಕಳೆದುಕೊಂಡ ಪ್ರಸನ್ನ ಅವರ ಬದುಕು ಮೂರಾಬಟ್ಟೆಯಾಗಿದ್ದರೂ ಚಿತ್ರರಂಗದ ಯಾವೊಬ್ಬ ದೊಡ್ಡ ನಟರು, ನಿರ್ದೇಶಕರುಗಳು ಪ್ರಸನ್ನಾರ ಕಷ್ಟ ವಿಚಾರಿಸಿಲ್ಲ, ಸಹಾಯ ಹಸ್ತ ಚಾಚಿಲ್ಲ.

ಅತ್ತ ಅಲ್ಲೊಂದು ಇಲ್ಲೊಂದು ಸಿಗುತ್ತಿದ್ದ ನಟನೆ ಅವಕಾಶಗಳು ನಿಂತು ಹೋಗಿದೆ, ಇತ್ತ ಬೇರೆ ಏನಾದ್ರೂ ಕೆಲಸ ಮಾಡಲು ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲನ್ನೇ ತೆಗೆಯಲಾಗಿದೆ. ಇದೀಗ ಏನೂ ಮಾಡಲಾಗದ ಸ್ಥಿತಿಯಲ್ಲಿರುವ ಪ್ರಸನ್ನ ಅವರು ಯಾರಾದರೂ ಸಹಾಯ ಮಾಡುತ್ತಾರೆಯೇ ಎಂದು ಎದುರು ನೋಡುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top