fbpx
ಸಮಾಚಾರ

ಮಹಾತ್ಮ ಗಾಂಧೀಜಿ ಮರಿಮೊಮ್ಮಗ ಕೊರೊನಾಗೆ ಬಲಿ

ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಮರಿ ಮೊಮ್ಮಗ ಸತೀಶ್ ಧುಪೇಲಿಯಾ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಸತೀಶ್ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸತೀಶ್ ಅವರ ಸೋದರಿ ಉಮಾ ಧುಪೆಲಿಯಾ ಸೋದರನ ಸಾವನ್ನು ಖಚಿತಪಡಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ಅಗಲಿದ್ದಾನೆ. ನ್ಯೂಮೇನಿಯಾ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಕೋವಿಡ್-19 ಸೋಂಕು ಸಹ ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸೋದದ ಕಾರ್ಡಿಯಾಕ್ ಅರೆಸ್ಟ್ ನಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ ಎಂದು ಉಮಾ ಧುಪೆಲಿಯಾ ಹೇಳಿದ್ದಾರೆ.

ಉಮಾ ಜೊತೆಗೆ, ಧುಪೆಲಿಯಾ ಜೋಹಾನ್ಸ್‌ಬರ್ಗ್‌ನಲ್ಲಿ ವಾಸಿಸುತ್ತಿರುವ ಕೀರ್ತಿ ಮೆನನ್ ಎಂಬ ಇನ್ನೊಬ್ಬ ಸಹೋದರಿಯನ್ನು ಅಗಲಿದ್ದಾರೆ. ಕೀರ್ತಿ ಅವರು ಗಾಂಧಿಯ ಸ್ಮರಣೆಯನ್ನು ಗೌರವಿಸುವ ವಿವಿಧ ಯೋಜನೆಗಳಲ್ಲಿ ಸಕ್ರಿಯರಾಗಿದ್ದಾರೆ.

ತನ್ನ ಜೀವನದ ಬಹುಪಾಲು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೋಗ್ರಾಫರ್ ಮತ್ತು ಛಾಯಾಗ್ರಾಹಕನಾಗಿ ಕಳೆದ ಧುಪೆಲಿಯಾ, ಡರ್ಬನ್ ನ ಬಳಿಯ ಫೀನಿಕ್ಸ್ ಸೆಟಲ್ ಮೆಂಟ್ ನಲ್ಲಿ ಮಹಾತ್ಮರು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಗಾಂಧಿ ಅಭಿವೃದ್ಧಿ ಟ್ರಸ್ಟ್ಗೆ ಸಹಾಯ ಮಾಡುವಲ್ಲಿ ತುಂಬಾ ಸಕ್ರಿಯರಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top