fbpx
ಸಮಾಚಾರ

ದಿನಕರ್ ನಿರ್ದೇಶನದ ಚಿತ್ರಕ್ಕೆ ನಿಖಿಲ್ ಕುಮಾರ್ ಹೀರೊ? ಸ್ಪಷ್ಟನೆ ನೀಡಿದ ದಿನಕರ್

ನಿರ್ದೇಶಕ ದಿನಕರ್ ತೂಗುದೀಪ ಹೊಸ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾಗಳನ್ನು ಮಾಡಿರುವ ದಿನಕರ್ ನಟ ನಿಖಿಲ್‌ ಕುಮಾರ್‌ ಜೊತೆ‌ ಸಿನಿಮಾ ಮಾಡುತ್ತಾರೆ ಎಂದು ಕೂಡ ಕೆಲವು ಕಡೆ ಸುದ್ದಿ ಆಯಿತು. ಆದರೆ ಅದಕ್ಕೆ ಸ್ವತಃ ದಿನಕರ್‌ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ದಿನಕರ್ ತೂಗುದೀಪ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ, ‘ನಾನು ನನ್ನ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ತಯಾರಿಯಲ್ಲಿದ್ದೇನೆ. ಇದಕ್ಕೆ ಕಲಾವಿದರ ಆಯ್ಕೆ ಇನ್ನು ಅಂತಿಮವಾಗಿಲ್ಲ.” ಎಂದು ಎಲ್ಲಾ ಗಾಸಿಪ್ ಗಳಿಗೆ ದಿನಕರ್ ತೆರೆ ಎಳೆದಿದ್ದಾರೆ.

ಇನ್ನು ಮುಂದುವರೆದು, “ಕೆಲವು ಮೀಡಿಯಾ ವೆಬ್‌ಸೈಟ್‌ಗಳು ಹಾಗೂ ಚಾನೆಲ್‌ಗಳು ಇದನ್ನು ತಿಳಿದುಕೊಳ್ಳದೆ ತಮಗೆ ಇಷ್ಟ ಬಂದವರ ಹೆಸರನ್ನು ಇಲ್ಲಿ ಸೇರಿಸಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದು, ಅವರಿಗೆ ಶೋಭೆ ತರುವುದಿಲ್ಲ. ಯಾವುದೇ ವಿಷಯವಾಗಲಿ, ಅದಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸದೇ ಪ್ರಕಟಿಸುವುದು ಉಚಿತವಲ್ಲ. ಚಿತ್ರದ ಎಲ್ಲ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಅಧಿಕೃತವಾಗಿ ಹೇಳಿಕೆ ನೀಡುತ್ತೇನೆ’ ಎಂದು ಸೋಶಿಯಲ್‌ ಮೀಡಿಯಾ ಮೂಲಕ ದಿನಕರ್‌ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top