fbpx
ಸಮಾಚಾರ

ಜೆಡಿಎಸ್ ಪಕ್ಷ ಬಿಡುವ ಕುರಿತು ಸ್ಪಷ್ಟನೆ ನೀಡಿದ ದೇವೇಗೌಡ

ಎರಡು ವರ್ಷಗಳ ಕಾಲ ನಾನು ಜೆಡಿಎಸ್‌ನಲ್ಲಿಯೇ ಇರುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ. ನನ್ನ ಮುಂದಿನ ರಾಜಕೀಯ ನಡೆ ಅಂದಿನ ರಾಜಕೀಯ ಸನ್ನಿವೇಶ, ಪರಿಸ್ಥಿತಿ ಮತ್ತು ಜನರ ಅಭಿಪ್ರಾಯವನ್ನು ಅವಲಂಬಿಸಿರುತ್ತದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

 

 

ಮೈಸೂರು ಸಮೀಪದ ಉದ್ಭೂರು ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜಾತ್ಯತೀತ ಜನತಾ ದಳ ಪಕ್ಷದ ಶಾಸಕನಾಗಿದ್ದೇನೆ. ಪಕ್ಷ ಬಿಡುವ ಮಾತೇ ಇಲ್ಲ. ಎರಡು ವರ್ಷ ಜೆಡಿಎಸ್ ಶಾಸಕನಾಗಿಯೇ ಅವಧಿ ಮುಗಿಸುತ್ತೇನೆ ಎಂದರು.

ಸದ್ಯ ನಾನು ಜಾತ್ಯತೀತ ಜನತಾದಳದ ಶಾಸಕನಾಗಿದ್ದೇನೆ. ಈಗ ಪಕ್ಷ ಬಿಡುವ ಮಾತೇ ಇಲ್ಲ. ಇನ್ನೆರಡು ವರ್ಷ ಜಾತ್ಯತೀತ ಜನತಾದಳದ ಶಾಸಕನಾಗಿಯೇ ಅವಧಿ ಮುಗಿಸುತ್ತೇನೆ. ಮುಂದಿನ ಚುನಾವಣೆಯ ವೇಳೆಗೆ ಜಾತ್ಯತೀತ ಜನತಾದಳ ಹೇಗಿರುತ್ತದೆ? ಬಿಜೆಪಿ ಹೇಗಿರುತ್ತದೆ? ಕಾಂಗ್ರೆಸ್ ಹೇಗಿರುತ್ತದೆ ಎಂಬುದನ್ನು ಗಮನಿಸುತ್ತೇನೆ. ಅಂತಿಮವಾಗಿ ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ ರಾಜಕೀಯ ತೀರ್ಮಾನ ಮಾಡುತ್ತೇನೆ ಎಂದಿರುವ ಜಿಟಿ ದೇವೇಗೌಡ, ಈಗಲೇ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪಕ್ಷ ಬದಲಾವಣೆಯ ಗುಸುಗುಸು ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top