fbpx
ಸಮಾಚಾರ

ನೆಟ್ಟಿಗರಿಗೆ ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಪುತ್ರಿ: ಕ್ಯೂಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಮಕ್ಕಳು ಮಾತ್ರ ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಶಿಲ್ಪಾ ಹಾಗೂ ಗಣೇಶ್​ ತಮ್ಮ ಮಗಳು ಹಾಗೂ ಮಗನ ವಿಡಿಯೋಗಳನ್ನು ಆಗಾಗ ಪೋಸ್ಟ್​ ಮಾಡುತ್ತಿರುತ್ತಾರೆ. ಈಗ ಗಣೇಶ್ ಮಗಳ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

 

 

ವಿಡಿಯೋದಲ್ಲಿ ಏನಿದೆ
ಗಣೇಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗಳು ಚರಿತ್ರಿಯಾ ಗಣೇಶ್ ಅವರು ಆಮ್ಲೆಟ್ ಮಾಡುತ್ತಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಾ ಅಲ್ಲಿಗೆ ಬಂದ ಗಣೇಶ್ ಅವರು ಮಗಳೇ ಏನ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಚರಿತ್ರಿಯಾ ಇಂಗ್ಲಿಷಿನಲ್ಲಿ ಆಮ್ಲೆಟ್ ಮಾಡುವ ವಿಧಾವನ್ನು ವಿವರಿಸುತ್ತಾರೆ. ಈ ವೇಳೆ ಹತ್ತಿರ ಬಂದ ಗಣೇಶ್ ಮಗಳೇ ಏನ್ ಮಾಡುತ್ತಿದ್ದೀಯಾ ಸರಿಯಾಗಿ ಹೇಳು ಅಂದಾಗ ಕನ್ನಡದಲ್ಲಿ ಆಮ್ಲೆಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತಾರೆ.

 

 

ಈ ವಿಡಿಯೋದಲ್ಲಿ ಇನ್ನೋರ್ವ ವಿಶೇಷ ವ್ಯಕ್ತಿಯೂ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ. ಗಣೇಶ್‌ ಅವರ ಮಗ ವಿಹಾನ್‌ ವಿಡಿಯೋಕ್ಕೆ ಡಿಸ್ಟರ್ಬ್‌ ಮಾಡುವ ಸಲುವಾಗಿ ಮಧ್ಯೆ ಮಧ್ಯೆ ಮಾತನಾಡಿದ್ದಾರೆ. ಮಕ್ಕಳ ಜತೆಗಿನ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿರುವ ಗಣೇಶ್‌ ಇದೆಲ್ಲ ಯೂಟ್ಯೂಬ್‌ ಪ್ರಭಾವ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top