fbpx
ಸಮಾಚಾರ

ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದ ನಟ ಜಗ್ಗೇಶ್‌!

ನಟ, ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 40 ವರ್ಷಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಬಂದು ಜಗ್ಗೇಶ್‌ ಮಾತನಾಡಿದರು. ಈ ವೇಳೆ ಅವರು ಕೆಲವು ಘಟನೆಗಳನ್ನು ನೆನಪಿಸಿಕೊಂಡು ಭಾವುಕರಾದರು. ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು. ಸಾಮಾನ್ಯವಾಗಿ ಪಟಪಟ ಎಂದು ಮಾತನಾಡುವ ಅವರು ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡು ಅತ್ತುಬಿಟ್ಟರು!

“ಚೂಪು ಕಣ್ಣು ಕೆದರಿದ ತಲೆ ಆಶಾದಯಕವಾಗಿದ್ದಾನೆ ಅನ್ನೋ ಆರ್ಟಿಕಲ್‌ ನೆನಪಾಗ್ತಿದೆ. ಮೂರು ಡ್ರೆಸ್​ಗಳನ್ನ ಬದಲಾಯಿಸಿ ಕಬ್ಬನ್ ಪಾರ್ಕ್​ನಲ್ಲಿ ಫೋಟೋಶೂಟ್ ಮಾಡಿದ್ವಿ. ಯಾರೋ ಸಿಗಬಹುದು, ಯಾರೋ ಏನೋ ಕೊಡಬಹುದು ಅನ್ನೋ ಆಸೆಯೊಂದಿಗೆ ಸಿನಿ ಪಯಣ ಆರಂಭವಾಗಿತ್ತು ಎಂದು ತಮ್ಮ ಬದುಕಿನ ಏಳು ಬೀಳುಗಳನ್ನು ಮೆಲಕು ಹಾಕುತ್ತ ಅಂದಿನ ಪರಿಸ್ಥಿತಿ ನೆನೆದು ಜಗ್ಗೇಶ್ ಕಣ್ಣೀರಿಟ್ಟಿರು.

ಪತ್ನಿ ಪರಿಮಳ ಜಗ್ಗೇಶ್​ ಕೂಡ ತಮ್ಮ ಪಯಣದಲ್ಲಿನ ಏಳು ಬೀಳು ಮೆಲುಕು ಹಾಕಿದರು. ಜಗ್ಗೇಶ್​ಗೆ ಪಾತ್ರಗಳು ಸಿಗದಿದ್ದಾಗ ತುಂಬಾ ಕಷ್ಟದ ದಿನಗಳನ್ನು ಕಳೆಯಬೇಕಾಯಿತು. ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಇದರಿಂದ ಅದೆಲ್ಲವನ್ನೂ ದಾಟಿ ಬಂದಿದ್ದೇವೆ ಎಂದು ಪರಿಮಳ ಜಗ್ಗೇಶ್ ಭಾವುಕರಾದ್ರು.

ಇನ್ನೂ ಚಿತ್ರರಂಗದಲ್ಲಿ 40 ವರ್ಷ ತನ್ನ ಜರ್ನಿಯಲ್ಲಿ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ
ಜಗ್ಗೇಶ್ ತಿಳಿಸಿದ್ದಾರೆ. ಸಿನಿಮಾರಂಗದಲ್ಲಿ ನನ್ನನ್ನು 40 ವರ್ಷ ಪೂರೈಸುವಂತೆ ಆ ದೇವರು ಮಾಡಿರುವುದು. ಜೊತೆಗೆ ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top