fbpx
ಸಮಾಚಾರ

“ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ತಂದೆಗೆ ಅರ್ಪಿಸುವೆ, ಅಪ್ಪನ ಕನಸು ನನಸು ಮಾಡುವೆ” ಮೊಹಮ್ಮದ್ ಸಿರಾಜ್

ತಂದೆಯ ನಿಧನದ ನಡುವೆಯೂ ತವರಿಗೆ ಮರಳದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮುಂದುವರಿಸಿರುವ ವೇಗಿ ಮೊಹಮದ್‌ ಸಿರಾಜ್‌, ಭಾರತ ತಂಡದ ಗೆಲುವಿಗೆ ನೆರವಾಗುವ ಮೂಲಕ ಇತ್ತೀಚಿಗೆ ನಿಧನ ಹೊಂದಿದ ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ್ದಾರೆ.

 

 

ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಸಿರಾಜ್, ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ತೋರುವ ಮೂಲಕ ಅಪ್ಪನ ಕನಸನ್ನು ನನಸು ಮಾಡುತ್ತೇನೆ ಎಂದಿದ್ದಾರೆ.

“ತಂದೆಯ ಮರಣ ನನಗೆ ಬಹುದೊಡ್ಡ ನಷ್ಟ, ಏಕೆಂದರೆ ಅವರು ನನ್ನನ್ನು ಹೆಚ್ಚು ಬೆಂಬಲಿಸುವ ವ್ಯಕ್ತಿಯಾಗಿದ್ದರು. ನನ್ನನ್ನು ಭಾರತ ತಂಡದಲ್ಲಿ ಕಾಣುವುದು ಮತ್ತು ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದು ನನ್ನ ತಂದೆಯ ಕನಸಾಗಿತ್ತು. ಈಗ ನಾನು ಅದನ್ನು ಇಡೇರಿಸುವ ಗುರಿಯನ್ನು ಹೊಂದಿದ್ದೇನೆ” – ಮೊಹಮ್ಮದ್ ಸಿರಾಜ್​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top