‘ಬಾಹುಬಲಿ’ ಸಿನಿಮಾದಲ್ಲಿ ಬಲ್ಲಾಳದೇವ ಆಗಿ ಅಬ್ಬರಿಸಿದ್ದ ನಟ ರಾಣಾ ಅವರ ದೇಹಸ್ಥಿತಿ ನೋಡಿ ಅವರ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದರು. ಇದೀಗ ರಾಣಾ ಅವರು ತಮ್ಮ ಆರೋಗ್ಯ ನೆನೆದು ಕಣ್ಣೀರು ಹಾಕಿದ್ದಾರೆ.
Here's a glimpse into Episode 2 of #SamJam!
Premieres November 27 on @ahavideoIN.
Get ready for a roller coaster ride of emotions! #SamJamOnAHA @RanaDaggubati @nagashwin7 @Samanthaprabhu2 @harshachemudu pic.twitter.com/QXhaeooWKp— ahavideoIN (@ahavideoIN) November 22, 2020
ನಟಿ ಸಮಂತಾ ಅಕ್ಕಿನೇನಿ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಟಾಕ್ ಶೋ ಒಂದರಲ್ಲಿ ರಾಣಾ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ಅವರು ಕಿಡ್ನಿ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. “ವೇಗವಾಗಿ ಹೋಗುತ್ತಿದ್ದ ನನ್ನ ಜೀವನದಲ್ಲಿ ಒಂದು ದೊಡ್ಡ ಬ್ರೇಕ್ ಬಂತು. ಶೇ.30 ರಷ್ಟು ಸಾಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು” ಎಂದು ಭಾವುಕರಾಗಿದ್ದಾರೆ.
“ನಾನು ಹುಟ್ಟಿದಾಗಿನಿಂದ ನನಗೆ ಬಿಪಿ ಸಮಸ್ಯೆ ಇತ್ತು ಎಂದು ವೈದ್ಯರು ಹೇಳಿದ್ದರು. ಹೃದಯದ ಸುತ್ತ ಸಮಸ್ಯೆಗಳಿದ್ದವು ಹಾಗೂ ಕಿಡ್ನಿ ವೈಫಲ್ಯವಾಗಿದ್ದವು. ಇದರಿಂದಾಗಿ 70% ಬ್ರೈನ್ ಹ್ಯಾಮರೇಜ್ ಹಾಗೂ ಸ್ಟ್ರೋಕ್ ಆಗುವ ಸಾಧ್ಯತೆಗಳಿತ್ತು. ನಾನು 30% ಸಾಯಲುಬಹುದಿತ್ತು” ಎಂದು ರಾಣಾ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
