fbpx
ಸಮಾಚಾರ

ಕನ್ನಡ ಬಿಗ್‌ ಬಾಸ್‌ ಹೊಸ ಸೀಸನ್‌ ಬಗ್ಗೆ ಬ್ರೇಕಿಂಗ್‌ ನ್ಯೂಸ್: ಯಾವಾಗಿಂದ ಸ್ಟಾರ್ಟ್ ಗೊತ್ತಾ?

ಕೊರೋನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನ 8ನೇ ಆವೃತ್ತಿ ಜನವರಿ ಮೂರನೇ ವಾರದಲ್ಲಿ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಾರಿ 16 ಮಂದಿ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಎಂದಿನಂತೆ ನಟ ‘ಕಿಚ್ಚ’ ಸುದೀಪ್‌ ಅವರೇ ನಿರೂಪಣೆ ಮಾಡಲಿದ್ದಾರೆ.

ಬಿಗ್‍ಬಾಸ್ ಪ್ರಸಾರವಾಗುವ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಜೊತೆ ನಟ ಕಿಚ್ಚ ಸುದೀಪ್ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಬಾರಿ ಬಿಗ್‍ಬಾಸ್ ಮನೆಗೆ ಪ್ರವೇಶ ಪಡೆಯುವ 15 ಸ್ಪರ್ಧಿಗಳ ಹೆಸರು ಅಂತಿಮವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ ಮೂಲಕ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ ಹಂಚಿಕೊಂಡಿದ್ದಾರೆ. ಸುದೀಪ್‌ ಜೊತೆ ಚರ್ಚೆ ಮಾಡುತ್ತಿರುವ ಒಂದು ಫೋಟೋವನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ‘ಬಿಗ್‌ ಬಾಸ್‌ ಕನ್ನಡ ಹೊಸ ಸೀಸನ್‌ ಕೆಲಸಗಳು ಪ್ರಗತಿಯಲ್ಲಿವೆ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ.

ಜನವರಿ ಮೂರನೇ ವಾರದಲ್ಲಿ ಸಂಕ್ರಾಂತಿ ಹಬ್ಬದ ಬಳಿಕ ಬಿಗ್‌ ಬಾಸ್‌ ಸೀಸನ್‌ 8 ಶುಭಾರಂಭಗೊಳ್ಳಲಿದೆ. ​​​ಕೋವಿಡ್‌ ಸಂಬಂಧಿ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಈ ಬಾರಿಯ ಬಿಗ್‌ ಬಾಸ್‌ ಕಾರ್ಯಕ್ರಮ ನಡೆಯಲಿದೆ. ಹಿಂದಿ ಬಿಗ್‌ಬಾಸ್ ಈಗಾಗಲೇ ಆರಂಭವಾಗಿದ್ದು, ಒಬ್ಬರು ಜಾನ್ ಕುಮಾರ್ ಈಗಾಗಲೇ ಮನೆಯಿಂದ ಹೊರ ಬಂದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top